ಕಾಸರಗೋಡು: ಕಾಸರಗೋಡು ವಿಧಾನಸಭಾ ಮಂಡಲದ ಐಕ್ಯರಂಗದ ಅಭ್ಯರ್ಥಿ ಕಲ್ಲಟ್ರ ಮಾಹಿನ್‌ರವರ ಮೂರನೇ ಹಂತದ ಚುನಾವಣಾ ಪ್ರಚಾರ ಇಂದು ಆರಂಭಗೊಂಡಿತು. ಬೆಳಿಗ್ಗೆ ಬೆಳ್ಳೂರು ಪಂಚಾಯತ್‌ನ ಕಿನ್ನಿಂಗಾರಿನಲ್ಲಿ ಕಾರ್ನರ್ ಸಭೆಯನ್ನು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು. ಬಳಿಕ ಕೋಟಿಮೂಲೆ, ಬಜ, ನೆಟ್ಟಣಿಗೆ, ಪಳ್ಳಪ್ಪಾಡಿ, ಮದಕ, ನಾಟೆಕಲ್ಲು ಮೊದಲಾದೆಡೆಗಳ ಮೂಲಕ ಸಂಚರಿಸಿದರು. ಅಪರಾಹ್ನ ಪೂತಪ್ಪಲಂ, ಕಾಯಿಮಲೆ, ಕುಂಬ್ಡಾಜೆ ಪಂಚಾಯತ್‌ನ ಕಜೆ ಎಸ್‌ಸಿನಗರ, ಬೆಳಿಂಜ, ಗೋಸಾಡದ ಮೂಲಕ ಸಾಗಿ ರಾತ್ರಿ ಮಾರ್ಪನಡ್ಕದಲ್ಲಿ ಸಮಾಪ್ತಿಯಾಗಲಿದೆ.ನಿನ್ನೆ ಕಾಸರಗೋಡು ರೈಲು ನಿಲ್ದಾಣಕ್ಕೆ ತಲುಪಿ ಪ್ರಯಾಣಿಕರಲ್ಲಿ ಮತ ಯಾಚಿಸಿದರು. ಜಿಲ್ಲಾ ನ್ಯಾಯಾಲಯ ಸಮುಚ್ಛಯ, ಕಲೆಕ್ಟ್ರೇಟ್‌ಗೆ ಭೇಟಿ ನೀಡಿ ಅಧಿಕಾರಿಗಳು, ನ್ಯಾಯವಾದಿಗಳು, ನೌಕರರಲ್ಲಿ ಮತ ಯಾಚಿಸಿದರು. ಸಂಜೆ ಕಾಸರಗೋಡು ನಗರದ ಅಂಗಡಿಗಳನ್ನು ಕೇಂದ್ರೀಕರಿಸಿ ವ್ಯಾಪಾರಿಗಳು, ಗ್ರಾಹಕರನ್ನು ಮುಖತಃ ಭೇಟಿಯಾದರು. ಈ ವೇಳೆ ಎನ್.ಎ. ಖಾಲಿದ್, ಹಾರಿಸ್ ಚೂರಿ, ಹಾಶಿಂ ಕಡವತ್ ಸಹಿತ ಹಲವಾರು ಮಂದಿ ಮುಖಂಡರು ಜತೆಗಿದ್ದರು.






