ಕಾಸರಗೋಡು: ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯದ ಪೊಲೀಸ್ ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ. ಇದರಂತೆ ಮಂಜೇಶ್ವರ ಠಾಣೆಯ ನೂತನ ಇನ್ಸ್ಪೆಕ್ಟರ್ ಆಗಿ ಜಿಜೀಶ್ರನ್ನು ನೇಮಿಸಲಾಗಿದೆ. ಇಲ್ಲಿಂದ ಪಿ.ಅಜಿತ್ ಕುಮಾರ್ರನ್ನು ತಳಿಪರಂಬಕ್ಕೆ ವರ್ಗಾಯಿಸ ಲಾಗಿದೆ. ಕುಂಬಳೆ ಕರಾವಳಿ ಠಾಣೆಯಿಂದ ಕೆ.ಆರ್. ಅನೂಪ್ರನ್ನು ಬದಿಯಡ್ಕಕ್ಕೆ, ಕಲ್ಲಿಕೋಟೆಯಿಂದ ಬೈಜು ಕೆ ಜೋಸ್ರನ್ನು ಕುಂಬಳೆಗೆ ವರ್ಗಾಯಿಸಲಾಗಿದೆ. ಶಿವನ್ ಚೋಡತ್ತ್ತ್ ಅವರನ್ನು ಹೊಸದುರ್ಗಕ್ಕೆ, ಎಂ.ಪಿ. ವಿನೀಶ್ರನ್ನು ವಿದ್ಯಾನಗರಕ್ಕೆ , ಕೆ.ಪಿ. ವಿನೋದ್ ರನ್ನು ಬೇಡಗಕ್ಕೆ ಸಿ. ಶಾಜುರನ್ನು ಅಂಬಲತ್ತರಕ್ಕೆ, ಉಮೇಶ್ರನ್ನು ಚಿಟ್ಟಾರಿಕ್ಕಲ್ಗೆ, ಎಂ.ವಿ. ಶಿಜುರನ್ನು ಚಂದೇರಕ್ಕೆ, ಎಂ.ಕೆ. ಅನಿಲ್ ಕುಮಾರ್ರನ್ನು ಬೇಡಗಕ್ಕೆ, ಕೆ. ಸಂತೋಷ್ರನ್ನು ರಾಜಪುರಕ್ಕೆ, ಕೆ. ಮುರಳೀ ಧರನ್ರನ್ನು ನೀಲೇಶ್ವರಕ್ಕೆ, ಅನಿಲ್ ಕುಮಾರ್ರನ್ನು ಬೇಕಲ ಠಾಣೆಗೆ ನೇಮಿಸಲಾಗಿದೆ. ಎಂ.ವಿ. ರಾಜಗೋಪಾಲ್ ಚೀಮೇನಿ ಠಾಣೆಯ ನೂತನ ಇನ್ಸ್ಪೆಕ್ಟರ್ ಆಗಿದ್ದಾರೆ. ಆದೂರಿನಿಂದ ಎಂ.ವಿ. ವಿಷ್ಣುಪ್ರಸಾದ್ರನ್ನು ಕಲ್ಲಿಕೋಟೆಗೆ ವರ್ಗಾಯಿಸಲಾಗಿದೆ. ಆದೂರಿಗೆ ಬದಲಿ ನೇಮಕಾತಿ ನಡೆದಿಲ್ಲ. ಶೀಘ್ರದಲ್ಲೇ ನೇಮಕಾತಿ ನಡೆಯುವ ಸಾಧ್ಯತೆ ಇದೆ.






