ಕಾಸರಗೋಡು: ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಕಾಸರಗೋಡು ಇದರ ವತಿಯಿಂದ ೯೦ನೇ ತ್ರಿಮೂರ್ತಿ ಶಿವಜಯಂತಿ ಕಾರ್ಯಕ್ರಮ ಶಿವರಾತ್ರಿಯಂದು ನಡೆಯಿತು. ನಿವೃತ್ತ ಎಎಸ್ಐ ಸಿ.ಎಚ್. ಬಾಬು ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ಅನಂತರಾಮ ಪಿ. ಮುಖ್ಯ ಅತಿಥಿಯಾಗಿದ್ದರು. ಶಿವಧ್ವಜಾರೋಹಣದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.
ಈಶ್ವರೀಯ ವಿಶ್ವವಿದ್ಯಾಲಯ ಕಾಸರಗೋಡು ಇದರ ಮುಖ್ಯ ಸಂಚಾಲಕಿ ರಾಜಯೋಗಿನಿ ಬಿ.ಕೆ. ವಿಜಯಲಕ್ಷ್ಮಿ ಶಿವರಾತ್ರಿ ಸಂದೇಶ ನೀಡಿದರು. ಸರಕಾರಿ ಕಾಲೇಜಿನ ಸಹಾಯಕ ಪ್ರೊಫೆಸರ್ ರೋಹಿಣಿ, ಉಪನ್ಯಾಸಕ ಸತೀಶ್ ಡಿ. ಕರಿವೇಲಿ, ಎಸ್ಬಿಐ ಮೆನೇಜರ್ ರವಿಶಂಕರ್ ನಾಯರ್ ಶುಭ ಕೋರಿದರು. ಅತಿಥಿಗಳಾಗಿದ್ದ ಗುಣಪಾಲ, ವರಪ್ರಸಾದ್ ಕೋಟೆಕಣಿ, ರವೀಂದ್ರ ಪೂಜಾರಿಯವರನ್ನು ರಾಜಯೋಗಿನಿ ಬಿ.ಕೆ. ಮಂಗಳ, ಬಿ.ಕೆ. ಪ್ರೇಮ ಗೌರವಿಸಿದರು. ಈ ಸಂದರ್ಭದಲ್ಲಿ ಮಿನ್ಹ ಎಂ. ಕುಮಾರಿ ಸುಶ್ಮಾ ಮಲ್ಯರನ್ನು ಸನ್ಮಾನಿಸಲಾಯಿತು. ಕುಮಾರಿ ಆಶಿಕಾ, ಕೃಪಾ, ಕೀರ್ತಿ, ಕುಮಾರ ತುಷಾರ್, ಅಕ್ಷಿತ್ ನೃತ್ಯ ಪ್ರದರ್ಶನ ನೀಡಿದರು. ವಿಮಲ ಸ್ವಾಗತಿಸಿ, ಸಿಪಿಸಿಆರ್ಐಯ ಪ್ರಿನ್ಸಿಪಲ್ ಸೈಂಟಿಸ್ಟ್ ಬಿ.ಕೆ. ಸುಬ್ರಹ್ಮಣ್ಯ ಸಂಸ್ಥೆಯ ಪರಿಚಯ ನೀಡಿದರು. ಬಿ.ಕೆ. ಕವಿತ ವಂದಿಸಿದರು.







