ಅಗರ್ತಿಮೂಲೆಯಲ್ಲಿ ಬೀದಿ ನಾಯಿ ಕಚ್ಚಿ ಇಬ್ಬರಿಗೆ ಗಾಯ

ಉಪ್ಪಳ: ಮಂಗಲ್ಪಾಡಿ ಪಂಚಾ ಯತ್ ವ್ಯಾಪ್ತಿಯ ಪುಳಿಕುತ್ತಿ ಅಗರ್ತಿಮೂಲೆಯಲ್ಲಿ ಬೀದಿ ನಾಯಿ ಕಚ್ಚಿ ಇಬ್ಬರು ಗಾಯಗೊಂಡಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ನಿನ್ನೆ ಮಧ್ಯಾಹ್ನ ಅಗರ್ತಿಮೂಲೆಯಲ್ಲಿ ಸ್ಥಳೀಯರಾದ ಇಕ್ಬಾಲ್ ಹಾಗೂ ರಾಧಾಕೃಷ್ಣರಿಗೆ ಬೀದಿನಾಯಿ ಕಚ್ಚಿದ್ದು, ಇವರು ಚಿಕಿತ್ಸೆ ಪಡೆದಿದ್ದಾರೆ. ಬಳಿಕ ನಾಯಿಯನ್ನು ಹಿಡಿದು ಸ್ಥಳೀಯರು ಕಟ್ಟಿಹಾಕಿದ್ದಾರೆ. ಪುಳಿಕುತ್ತಿ, ಪ್ರತಾಪ ನಗರ, ಅಗರ್ತಿ ಮೂಲೆ ಸಹಿತ ಪರಿಸರ ಪ್ರದೇಶಗಳಲ್ಲಿ ಬೀದಿನಾಯಿಗಳ ಕಾಟ ವ್ಯಾಪಕಗೊಂ ಡಿದ್ದು, ವಾಹನ ಸಂಚಾರದ ವೇಳೆಯೂ ಬೆನ್ನಟ್ಟುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಬೀದಿನಾಯಿ ಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊ ಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

You cannot copy contents of this page