ಕಾಸರಗೋಡು: ಬೀಗ ಒಡೆದು ಮನೆಯೊಳಗೆ ನುಗ್ಗಿ ಭಾರೀ ಮೌಲ್ಯದ ಸಾಮಗ್ರಿಗಳನ್ನು ಕಳವುಗೈದ ಪ್ರಕರಣದ ಕುಖ್ಯಾತ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪಾಲಕ್ಕಾಡ್ ನೈಮಾರ ನಿವಾಸಿ ಶೆಟ್ಟರ್ ಜಲೀಲ್ (38) ಮತ್ತು ಮಂಗಲಾಡಂ ನಿವಾಸಿ ವಿಶ್ವನಾಥನ್ (35) ಬಂಧಿತ ಆರೋಪಿಗಳು. ಕಳೆದವರ್ಷ ಡಿಸೆಂಬರ್ ೨೬ರಂದು ಅಂಬಲತ್ತರಕ್ಕೆ ಸಮೀಪದ ಮುಟ್ಟಿಚರಲಿಯ ಮನೆಯೊಂದರ ಬೀಗ ಒಡೆದು ಒಳನುಗ್ಗಿ ಲ್ಯಾಪ್ಟೋಪ್, ಕ್ಯಾಮರಾ ಸೇರಿದಂತೆ ಒಂದು ಲಕ್ಷ ರೂ. ಮೌಲ್ಯದ ಸಾಮಗ್ರಿಗಳನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಈ ಇಬ್ಬರು ಆರೋಪಿಗಳನ್ನು ಅಂಬಲತ್ತರ ಪೊಲೀಸರು ಬಂಧಿಸಿದ್ದಾರೆ.
ಬೈಕ್ನಲ್ಲಿ ಬಂದು ಬೀಗ ಜಡಿದ ಮನೆಗಳನ್ನು ಮೊದಲು ಗುರುತಿಸಿ, ಬಳಿಕ ರಾತ್ರಿ ವೇಳೆ ಅಂತಹ ಮನೆಗಳಿಗೆ ನುಗ್ಗಿ ಕಳವುಗೈಯ್ಯುತ್ತಿರುವುದು ಬಂಧಿತ ಆರೋಪಿಗಳ ಕಳವು ರೀತಿಯಾಗಿದೆ. ಇವರಿಬ್ಬರು ಕುಖ್ಯಾತ ಕಳವು ಆರೋಪಿಗಳಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.






