ಉದಯಗಿರಿ ಶ್ರೀ ವಿಷ್ಣುಮೂರ್ತಿ ಒತ್ತೆಕೋಲ ನಾಳೆಯಿಂದ

ವಿದ್ಯಾನಗರ: ಉದಯಗಿರಿ ಶ್ರೀ ವಿಷ್ಣುಮೂರ್ತಿ ಕ್ಷೇತ್ರದ ಒತ್ತೆಕೋಲ ಮಹೋತ್ಸವ ನಾಳೆಯಿಂದ 12ರ ತನಕ ವಿವಿಧ ಕಾರ್ಯಕ್ರಮ ಗಳೊಂದಿಗೆ ನಡೆಯಲಿದೆ. ನಾಳೆ ಬೆಳಿಗ್ಗೆ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರರಿಗೆ ಪೂರ್ಣಕುಂಭ ಸ್ವಾಗತ, 7.30ಕ್ಕೆ ಆನೆಚಪ್ಪರ ಏರಿಸುವುದು, ಗಣಪತಿ ಹೋಮ, ತಂಬಿಲ, ಸಂಜೆ 4 ಗಂಟೆಗೆ  ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಕೈಲಾಸಪುರ ಶ್ರೀ ರಕ್ತೇಶ್ವರಿ ಗುಳಿಗ ಸನ್ನಿಧಿಯಿಂದ ಆರಂಭ, ಉಗ್ರಾಣ ತುಂಬಿಸುವುದು ನಡೆಯಲಿದೆ. 6.30ಕ್ಕೆ ದೀಪಾರಾಧನೆ, 7.30ರಿಂದ ಕೈಕೊಟ್ಟಿ ಕಳಿ, 8ಕ್ಕೆ ಮೆಗಾ ಫ್ಯೂಶನ್ ಡ್ಯಾನ್ಸ್, 9 ಗಂಟೆಗೆ ಪೂರಕಳಿ ನಡೆಯಲಿದೆ.

11ರಂದು ಬೆಳಿಗ್ಗೆ 7.30ಕ್ಕೆ ಮೇಲೇರಿ ಸೇರಿಸುವುದು, ಸಂಜೆ 6.30ಕ್ಕೆ ದೀಪಾರಾಧನೆ, ಭಂಡಾರ ಆಗಮನ, ದೈವದ ಆರಂಭ, 7 ಗಂಟೆಗೆ ಅಗ್ನಿಸ್ಪರ್ಶ, 9.30ಕ್ಕೆ ಕುಳಿಚ್ಚಾಟಂ, 11.30ಕ್ಕೆ ಸುಡುಮದ್ದು ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ 8 ಗಂಟೆಗೆ ಲೈವ್ ಮ್ಯೂಸಿಕಲ್ ಫ್ಯೂಷನ್, 9.30ರಿಂದ ವಿವಿಧ ಕಡೆಗಳಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ, 12 ಗಂಟೆಗೆ ವೈಕಂ ವಿಜಯಲಕ್ಷ್ಮಿ ನೇತೃತ್ವದ ಮೆಗಾ ಮ್ಯೂಸಿಕಲ್ ಲೈವ್ ಕಾರ್ಯಕ್ರಮ ನಡೆಯಲಿದೆ. 12ರಂದು ಮುಂಜಾನೆ 4 ಗಂಟೆಗೆ ಶ್ರೀ ವಿಷ್ಣುಮೂರ್ತಿ ದೈವದ ಅಗ್ನಿಸ್ನಾನ, 8 ಗಂಟೆಗೆ ತುಲಾಭಾರ, ಬಳಿಕ ಭಂಡಾರ  ಹಿಂತಿರುಗಲಿದೆ.

You cannot copy contents of this page