ಕಾಲ್ನಡೆ ಮೂಲಕ ಸಾಗಿ ಪುಸ್ತಕ ಮಾರಾಟ ಮಾಡುತ್ತಿದ್ದ ಉಪೇಂದ್ರ ಆಚಾರ್ಯ ನಿಧನ

ಕಾಸರಗೋಡು: ನಡೆದುಕೊಂಡು ಹೋಗಿ ಪುಸ್ತಕಗಳನ್ನು ಪುಸ್ತಕಪ್ರಿಯರಿಗೆ ತಲುಪಿಸುತ್ತಿದ್ದ ನಡೆದಾಡುವ ಗ್ರಂಥಾಲಯ ಎಂದೇ ಕರೆಸಿಕೊಂಡಿದ್ದ ಮೂಲತಃ ಅಣಂಗೂರು ನಿವಾಸಿ ಹಾಗೂ ಮೊಗ್ರಾಲ್ ಪುತ್ತೂರು ಬೆದ್ರಡ್ಕದ ಉಜಿತೆರೆಕೆ ಬಳಿ ವಾಸವಾಗಿದ್ದ ಉಪೇಂದ್ರ ಆಚಾರ್ಯ (80) ನಿಧನ ಹೊಂದಿದರು. ಮಕ್ಕಳ ಕಥೆಪುಸ್ತಕ, ಚಿತ್ರಕಥೆಪುಸ್ತಕಗಳು, ಸಾಮಾನ್ಯ ಜ್ಞಾನ ಪುಸ್ತಕ, ಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷಾ ಪುಸ್ತಕಗಳನ್ನು ಶಾಲಾ, ಕಾಲೇಜು, ಕಚೇರಿಗಳಿಗೆ ತೆರಳಿ ಅಗತ್ಯದವರಿಗೆ ಮಾರಾಟ ಮಾಡುತ್ತಿದ್ದ ಇವರು ಈ ಮೊದಲು ಮುದ್ರಣ ತಂತ್ರಜ್ಞರಾಗಿಯೂ ಕಾರ್ಯನಿರ್ವಹಿಸಿದ್ದರು. ಮಣಿಪಾಲ ಹಾಗೂ ಕಾಸರಗೋಡಿನ ಮುದ್ರಣಾಲ ಯದಲ್ಲಿ ಕೆಲಸ ನಿರ್ವಹಿಸಿದ್ದರು. ಇವರ ಬಗ್ಗೆ ಕೆಲವು ಪತ್ರಿಕೆಗಳಲ್ಲಿ ಸುದ್ಧಿಪ್ರಕಟವಾಗಿದೆ. ಇವರ ಪತ್ನಿ ಸಾವಿತ್ರಿ ಈ ಹಿಂದೆ ನಿಧನಹೊಂದಿದ್ದಾರೆ. ಮೃತರು  ಪುತ್ರ ದೀಪಕ್ ಆಚಾರ್ಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page