ಎಡನಾಡು ಕಣ್ಣೂರು ಸೇವಾ ಸಹಕಾರಿ ಬ್ಯಾಂಕ್ ವಠಾರದಲ್ಲಿ ಕಾವೇರಿ ನರ್ಸರಿ ಆರಂಭ

ಸೀತಾಂಗೋಳಿ: ಎಡನಾಡು ಕಣ್ಣೂರು ಸೇವಾ ಸಹಕಾರಿ ಬ್ಯಾಂಕ್‌ನ ಅಂಗಸಂಸ್ಥೆ ಕಾವೇರಿ ನರ್ಸರಿಯನ್ನು ಬ್ಯಾಂಕ್‌ನ ವಠಾರದಲ್ಲಿ  ಉದ್ಘಾಟಿಸ ಲಾಯಿತು. ವಿವಿಧ ರೀತಿಯ ಅಡಿಕೆ, ತೆಂಗು, ಹಣ್ಣಿನ ಗಿಡಗಳು, ವಾರದ ಎಲ್ಲಾ ದಿನಗಳಲ್ಲಿ ಲಭಿಸಲಿದೆ. ಸಹಕಾರಿ ಇಲಾಖೆಯ ಸಹಾಯಕ ರಿಜಿಸ್ಟ್ರಾರ್ ರವೀಂದ್ರನ್ ಮಂಜೇಶ್ವರ ಉದ್ಘಾಟಿಸಿದರು. ಬ್ಯಾಂಕ್‌ನ ಅಧ್ಯಕ್ಷ ಶ್ಯಾಮರಾಜ ದೊಡ್ಡಮಾಣಿ ಅಧ್ಯಕ್ಷತೆ ವಹಿಸಿದರು. ಕ್ಯಾಂಪ್ಕೋ ಉಪಾಧ್ಯಕ್ಷ ಪದ್ಮರಾಜ ಪಟ್ಟಾಜೆ ಮುಖ್ಯ ಅತಿಥಿಯಾಗಿದ್ದರು. ಎಡನಾಡು ಕ್ಷೀರೋತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಎಸ್.ಎನ್.ರಾವ್ ಮನ್ನಿಪ್ಪಾಡಿ, ವಾರ್ಡ್ ಸದಸ್ಯೆ ಲಕ್ಷ್ಮಿ ವಿ ಭಟ್ ಉಪಸ್ಥಿತರಿದ್ದರು. ಬ್ಯಾಂಕ್ ನಿರ್ದೇಶಕ ಕೃಷ್ಣಪ್ರಸಾದ್ ಸ್ವಾಗತಿಸಿ, ನಿರ್ದೇಶಕಿ ಹರಿಣಿ ಜಿ.ಕೆ. ನಾಯರ್ ವಂದಿಸಿದರು.

You cannot copy contents of this page