ಸೀತಾಂಗೋಳಿ: ಪುತ್ತಿಗೆ ಪಂಚಾಯತ್ ಮಟ್ಟದಲ್ಲಿ ಮಾ. 8 ರಂದು ಸೂರಂಬೈಲಿನ ಶ್ರೀ ಸಾಯಿರಾಮ್ ಭಟ್ ನಗರದಲ್ಲಿ ಜರಗಲಿರುವ ವಿರಾಟ್ ಹಿಂದೂ ಸಂಗಮದAಗವಾಗಿ ನಿನೆ ಧ್ವಜ ದಿನಾಚರಣೆ ಮತ್ತು ಬೈಕ್ ರ್ಯಾ ಲಿ ನಡೆಯಿತು.
ಧರ್ಮತ್ತಡ್ಕದಿಂದ ಆರಂಭಗೊAಡ ಬೈಕ್ ರಾಲಿಯನ್ನು ವನವಾಸಿ ಕಲ್ಯಾಣ ಯೋಜನೆಯ ಕಾರ್ಯಕರ್ತ ಸುಕುಮಾರನ್ ಅನಂತಪುರ ಓಂಕಾರ ಧ್ವಜವನ್ನು ಕಾರ್ಯಕ್ರಮದ ರಕ್ಷಾಧಿಕಾರಿ, ಪುತ್ತಿಗೆ ಶ್ರೀ ಸುಬ್ರಾಯ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಬಾಲಸುಬ್ರಹ್ಮಣ್ಯ ಭಟ್ ಚಕ್ಕಣಿಕೆ ಅವರಿಗೆ ಹಸ್ತಾಂತರಿಸುವ ಮೂಲಕ ಉದ್ಘಾಟಿಸಲಾಯಿತು. ಪ್ರಸಾದ್ ಮಾಸ್ತರ್ ಮುಗು, ಬಾಲಕೃಷ್ಣ ರೈ ಮುಗು, ಜನಾರ್ದನ ಕಣ್ಣೂರು, ಸುನಿಲ್ ಅನಂತಪುರ, ಸ್ವಾಗತ್ ಸೀತಾಂಗೋಳಿ, ಭುಜಂಗ ಬೇರ್ಯ, ಅವಿನಾಶ್ ಕಾರಂತ ಅನಂತಪುರ,ಗಣೇಶ್ ಪೆರ್ಲ, ಸುದರ್ಶನ್ ಅನಂತಪುರ ಮೊದಲಾದವರು ಉಪಸ್ಥಿತರಿದ್ದರು. ಬಳಿಕ ಪೆರ್ಮುದೆ, ಅಂಗಡಿಮೊಗರು, ಪುತ್ತಿಗೆ ಸೀತಾಂಗೋಳಿ ಮೂಲಕ ಸಂಚರಿಸಿದ ರ್ಯಾಲಿ ಕಾರ್ಯಕ್ರಮ ನಡೆಯಲಿರುವ ಸೂರಂಬೈಲಿನ ಮೈದಾನದಲ್ಲಿ ಸಮಾಪ್ತಿಯಾಯ್ತು.
ಬಳಿಕ ಹಿಂದೂ ಏಕತಾ ಸಮಿತಿಯ ರಕ್ಷಾಧಿಕಾರಿಗಳಲ್ಲಿ ಓರ್ವರಾದ ನಿವೃತ್ತ ಅಧ್ಯಾಪಕ, ಹಿರಿಯ ಸ್ವಯಂಸೇವಕ ಬಾಬು ಮಾಸ್ತರ್ ಸಿದ್ಧಿ ಬೈಲು ಧ್ವಜಾರೋಹಣ ನೆರವೇರಿಸಿದರು. ಅಶೋಕ ಮಾಸ್ತರ್ ಬಾಡೂರು ಮಾತನಾಡಿದರು. ಮಾ. 8 ರಂದು ನಡೆಯುವ ವಿರಾಟ್ ಹಿಂದು ಸಂಗಮ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲರೂ ಒಮ್ಮತದಿಂದ ಕಾರ್ಯಪ್ರವೃತರಾಗಬೇಕು. ಪ್ರತಿ ಮನೆ ಮನೆಗೂ ಕಾರ್ಯಕ್ರಮದ ಸಂದೇಶ ಮುಟ್ಟಬೇಕು. ಪ್ರತೀ ಮನೆಯಿಂದಲೂ ಜನರು ಬರುವಂತಾಗಬೇಕು ಎಂದವರು ಹೇಳಿದರು. ಇತರ ರಕ್ಷಾಧಿಕಾರಿಗಳಾದ ಶ್ರೀಪತಿ ಭಟ್ ಮುಂಗಿಲ, ಬಾಲಸುಬ್ರಹ್ಮಣ್ಯ ಭಟ್, ನೇತಾರರಾದ ಮುರಳೀಕೃಷ್ಣ ಹಳೆಮನೆ, ಪ್ರಸಾದ್ ಮಾಸ್ತರ್, ಅವಿನಾಶ್ ಅನಂತಪುರ, ಸುನಿಲ್ ಅನಂತಪುರ, ಜನಾರ್ಧನ ಕಣ್ಣೂರು, ಕೇಶವ ಮುಗು, ಗಂಗಾಧರ ಮುಗು, ಭುಜಂಗ ಬೇರ್ಯ, ಸುದರ್ಶನ್ ಅನಂತಪುರ, ಪುರುಷೊತ್ತಮ ದೇರಡ್ಕ ಮೊದಲಾದವರು ನೇತೃತ್ವ ನೀಡಿದರು.







