ಜಿಲ್ಲೆಯ ರೈಲು ಪ್ರಯಾಣಿಕರಿಗೆ ವಿಷು ಕೊಡುಗೆ 6 ಸ್ಪೆಷಲ್ ರೈಲುಗಾಡಿಗಳ ಘೋಷಣೆ

ಕಾಸರಗೋಡು: ಕೇರಳೀಯರಿಗೆ ರೈಲ್ವೇಯ ವಿಷು ಕೊಡುಗೆ. 6 ಸ್ಪೆಷಲ್ ರೈಲುಗಾಡಿಗಳನ್ನು ವಿಷು ಹಬ್ಬದಂಗವಾಗಿ ರೈಲ್ವೇ ಘೋಷಿಸಿದೆ. ಚೆನ್ನೈಯಿಂದ ನಿನ್ನೆ ಮಂಗಳೂರಿಗೆ ಸ್ಪೆಷಲ್ ರೈಲುಗಾಡಿ ಸಂಚಾರ ಆರಂಭಿಸಿದೆ. ನಿನ್ನೆ ರಾತ್ರಿ 11.55ಕ್ಕೆ ಚೆನ್ನೈ ಸೆಂಟ್ರಲ್‌ನಿಂದ ಹೊರಟ ರೈಲುಗಾಡಿ ಇಂದು ಸಂಜೆ ೪ ಗಂಟೆಗೆ ಮಂಗಳೂರು ಜಂಕ್ಷನ್ ರೈಲು ನಿಲ್ದಾಣಕ್ಕೆ ತಲುಪುವ ರೀತಿಯಲ್ಲಿ 06127 ನಂಬ್ರ ಸ್ಪೆಷಲ್ ಗಾಡಿ ಸಂಚಾರ ನಡೆಸುತ್ತಿದೆ.

ಇಂದು ಮಂಗಳೂರು ಜಂಕ್ಷನ್- ಚೆನ್ನೈ ಎಗ್ಮೋರ್ 06128 ನಂಬ್ರ ಸ್ಪೆಷಲ್ ರೈಲು ಸಂಚಾರ ನಡೆಸಲಿದೆ. ಇಂದು ರಾತ್ರಿ 8 ಗಂಟೆಗೆ ಮಂಗಳೂರು ಜಂಕ್ಷನ್‌ನಿಂದ ಹೊರಡುವ ರೈಲು ಗಾಡಿ ನಾಳೆ ಮಧ್ಯಾಹ್ನ 12.30ಕ್ಕೆ ಚೆನ್ನೈ ಎಗ್ಮೋರ್‌ಗೆ ತಲುಪಲಿದೆ. ಪಾಲಕ್ಕಾಡ್, ಶೊರ್ನೂರು, ತಿರೂರ್, ಕಲ್ಲಿಕೋಟೆ, ವಡಗರ, ತಲಶ್ಶೇರಿ, ಕಣ್ಣೂರು, ಪಯ್ಯನ್ನೂರು, ಕಾಞಂಗಾಡ್, ಕಾಸರಗೋಡು ಎಂಬೆಡೆಗಳಲ್ಲಿ ನಿಲುಗಡೆ ಮಂಜೂರು ಮಾಡಲಾಗಿದೆ. ಇದಕ್ಕಿರುವ ರಿಸರ್ವೇಶನ್ ಆರಂಭಗೊಂಡಿತು.

ನಾಳೆ ಚೆನ್ನೈ ಎಗ್ಮೋರ್- ಮಂಗಳೂರು ಸೆಂಟ್ರಲ್ 06153 ನಂಬ್ರ ಸ್ಪೆಷಲ್ ರೈಲು ಸಂಚಾರ ನಡೆಸಲಿದೆ. ಅಪರಾಹ್ನ 2.30ಕ್ಕೆ ಚೆನ್ನೈ ಎಗ್ಮೋರ್‌ನಿಂದ ಸಂಚಾರ ಆರಂಭಿಸಲಿದೆ. ನಿನ್ನೆಯೇ ಇದಕ್ಕಿರುವ ರಿಸರ್ವೇಶನ್ ಆರಂಭಗೊಂಡಿದೆ. ಈ ರೈಲು ಗಾಡಿಗೂ ಜಿಲ್ಲೆಯಲ್ಲಿ ಕಾಞಂಗಾಡ್, ಕಾಸರಗೋಡಿನಲ್ಲಿ ನಿಲುಗಡೆ ಮಂಜೂರು ಮಾಡಲಾಗಿದೆ.

ಎಪ್ರಿಲ್ 11ರಂದು ಮಂಗಳೂರು ಜಂಕ್ಷನ್‌ನಿಂದ ತಿರುವನಂತಪುರ ನೋರ್ತ್‌ಗೆ 06041 ನಂಬ್ರ ಸ್ಪೆಷಲ್ ರೈಲು ಸಂಚಾರ ನಡೆಸಲಿದೆ. ಮಂಗಳೂರು ಜಂಕ್ಷನ್‌ನಿಂದ ಸಂಜೆ 6ಕ್ಕೆ ಹೊರಡುವ ಈ ರೈಲು ಗಾಡಿ ಮರುದಿನ ಬೆಳಿಗ್ಗೆ 6.30ಕ್ಕೆ ತಿರುವನಂತಪುರ ನೋರ್ತ್‌ಗೆ ತಲುಪಲಿದೆ. ಈ ರೈಲಿಗೂ ಕಾಞಂಗಾಡ್, ಕಾಸರಗೋಡಿನಲ್ಲಿ ನಿಲುಗಡೆ ಮಂಜೂರು ಮಾಡಲಾಗಿದೆ.

ಎಪ್ರಿಲ್ 12ರಂದು ತಿರುವನಂತಪುರ ನೋರ್ತ್- ಮಂಗಳೂರು ಜಂಕ್ಷನ್ 06042 ನಂಬ್ರ ಸ್ಪೆಷಲ್ ರೈಲು ಸಂಚಾರ ನಡೆಸಲಿದೆ. 15ರಂದು ಮಂಗಳೂರು ಸೆಂಟ್ರಲ್‌ನಿಂದ ಚೆನ್ನೈ ಎಗ್ಮೋರ್‌ಗೆ ರೈಲು ಸಂಚಾರ ಆರಂಭಿಸಲಿದೆ. 15ರಂದು ಸಂಜೆ 4 ಗಂಟೆಗೆ ಮಂಗಳೂರು ಸೆಂಟ್ರಲ್‌ನಿಂದ ಹೊರಡುವ ಈ ರೈಲು ಮರುದಿನ ಬೆಳಿಗ್ಗೆ 10.45ಕ್ಕೆ ಎಗ್ಮೋರ್‌ಗೆ ತಲುಪಲಿದೆ. ಎಲ್ಲಾ ರೈಲುಗಳಿಗೂ ಜಿಲ್ಲೆಯಲ್ಲಿ ಕಾಞಂಗಾಡ್, ಕಾಸರಗೋಡಿನಲ್ಲಿ ನಿಲುಗಡೆ ಮಂಜೂರು ಮಾಡಲಾಗಿದೆ.

You cannot copy contents of this page