ಚುನಾವಣೆ: ‘ವೋಟ್‌ವಂಡಿ’ ಪ್ರಯಾಣ ಆರಂಭ

ಕಾಸರಗೋಡು: ವಿಧಾನಸಭಾ ಚುನಾವಣೆಗಿರುವ ಔಪಚಾರಿಕ ಸಿದ್ಧತೆ ಜಿಲ್ಲೆಯಲ್ಲಿ ಸಕ್ರಿಯವಾಯಿತು. ಜಿಲ್ಲಾ ಆಡಳಿತ ಕೂಟದ ಚುನಾವಣೆ ಪ್ರಚಾರ ಕಾರ್ಯಕ್ರಮದ ಕಾಲೇಜು ಮಟ್ಟದ ಪ್ರಯಾಣ ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಜಿಲ್ಲಾಧಿಕಾರಿ ಉದ್ಘಾಟಿಸಿ ದರು. 18 ವರ್ಷ ಪೂರ್ತಿಗೊಂಡ, ಚುನಾವಣೆಯ ಗುರುತು ಚೀಟಿ ಕೈವಶವಿರುವ ಎಲ್ಲಾ ಪೌರರು ಮದತಾನದ ಹಕ್ಕನ್ನು ವಿನಿಯೋಗಿಸಬೇಕೆಂದು ಜಿಲ್ಲಾಧಿಕಾರಿ ಕೆ. ಇಂಭಶೇಖರ್ ಈ ವೇಳೆ ಕರೆ ನೀಡಿದರು.

ಚುನಾವಣೆಯ ಪೂರ್ವ ಭಾವಿಯಾಗಿ ಮೊದಲ ಮತದಾರರಿಗೆ ಚುನಾವಣೆ ಪ್ರಕ್ರಿಯೆಗಳ ಬಗ್ಗೆ, ಇಲೆಕ್ಟ್ರೋನಿಕ್ ವೋಟರ್ ಮಿಷನ್ ಬಗ್ಗೆ ತಿಳುವಳಿಕೆ ನೀಡುವುದಕ್ಕಾಗಿ ‘ವೋಟ್‌ವಂಡಿ’ ಪ್ರಯಾಣ ನಡೆಸುತ್ತಿದೆ.

You cannot copy contents of this page