ಕುಂಬಳೆಯಲ್ಲಿ  ಮಿನಿ ಎಂಸಿಎಫ್‌ನಿಂದ ತ್ಯಾಜ್ಯ ತೆರವು ಪರಿಸರದಲ್ಲಿ ಬಿದ್ದ ತ್ಯಾಜ್ಯದಿಂದ ಮುಂದುವರಿದ ಸಮಸ್ಯೆ

ಕುಂಬಳೆ: ಕುಂಬಳೆಯಲ್ಲಿ ಸರಕಾರಿ ಆಸ್ಪತ್ರೆ ಹಾಗೂ ಶಾಲೆಗೆ ತೆರಳುವ ರಸ್ತೆ ಬದಿಯಿರುವ ಮಿನಿ ಎಂಸಿಎಫ್‌ನಿಂದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತೆರವುಗೊಳಿಸಿದ್ದು, ಇದೇ ವೇಳೆ ಅದರ ಸಮೀಪದಲ್ಲಿ ರಾಶಿ ಬಿದ್ದಿರುವ ತ್ಯಾಜ್ಯವನ್ನು ತೆರವುಗೊಳಿ ಸದೆ ಅಲ್ಲೇ ಬಿಟ್ಟಿರುವುದು ಸ್ಥಳೀಯರಿಗೆ ಮತ್ತೆ ಸಮಸ್ಯೆ ಎದುರಾಗಿದೆ. ಎಂಸಿಎಫ್‌ನ ಸುತ್ತುಮುತ್ತ ಎಸೆಯಲಾದ ಪ್ಲಾಸ್ಟಿಕ್ ತ್ಯಾಜ್ಯಗಳೊಂದಿಗೆ ಆಹಾರ ವಸ್ತುಗಳನ್ನು ಉಪೇಕ್ಷಿಸಲಾಗಿದ್ದು ಅದರಿಂದ ದುರ್ನಾತ ಬೀರುತ್ತಿದೆ. ಅಲ್ಲದೆ ಆಹಾರ ವಸ್ತುಗಳನ್ನು ತಿನ್ನಲು ಬೀದಿ ನಾಯಿಗಳು ಅಲ್ಲಿಗೆ ತಲುಪುತ್ತಿದ್ದು, ಅವುಗಳಿಂದ ಜನರಿಗೆ ದಾಳಿಯ ಭಯವೂ ಹುಟ್ಟಿಕೊಂಡಿದೆ.  ಈ ಸಮಸ್ಯೆ ಬಗ್ಗೆ ‘ಕಾರವಲ್’ ಫೆ. ೯ರಂದು ವರದಿ ಪ್ರಕಟಿಸಿತ್ತು.  ಈ ವರದಿಯ ಬೆನ್ನಲ್ಲೇ ಹಸಿರು ಕ್ರಿಯಾ ಸೇನೆ ಕಾರ್ಯಕರ್ತರು ತಲುಪಿ ಎಂಸಿಎಫ್‌ನಲ್ಲಿದ್ದ  ಪ್ಲಾಸ್ಟಿಕ್ ತ್ಯಾಜ್ಯವನ್ನು ತೆರವುಗೊಳಿಸಿದ್ದಾರೆ. ಆದರೆ ಅದರ ಪರಿಸರದಲ್ಲಿ ಬಿದ್ದಿರುವ ತ್ಯಾಜ್ಯವನ್ನು ಅಲ್ಲಿಯೇ ಬಿಡಲಾಗಿದೆ. ಇದರಿಂದ ದುರ್ನಾತ ಹೆಚ್ಚಿದ್ದು ಅದರ ಜೊತೆಗೆ ಬೀದಿ ನಾಯಿಗಳ ಉಪಟಳವೂ ತೀವ್ರಗೊಂಡಿದೆ.  ಎಂಸಿಎಫ್ ಪರಿಸರದಲ್ಲಿರುವ ತ್ಯಾಜ್ಯವನ್ನು ತೆರವುಗೊಳಿ ಸದಿರುವುದು ನಾಗರಿಕರಿಂದ   ಪ್ರತಿಭಟನೆ ವ್ಯಕ್ತವಾಗಿದೆ. ಎಲ್ಲೆಡೆ ನಾಡು ಶುಚೀಕರಣದತ್ತ ಸಾಗುತ್ತಿರುವಾಗ ಕುಂಬಳೆಯಲ್ಲಿ ಮಾತ್ರ ಅಲ್ಲಲ್ಲಿ ತ್ಯಾಜ್ಯ ಎಸೆದು ಪರಿಸರ ಮಾಲಿನ್ಯ ಸೃಷ್ಟಿಸುತ್ತಿರಲು ಕಾರಣವೇನೆಂದು ನಾಗರಿಕರು  ಸಂಬಂಧಪಟ್ಟ ಅಧಿಕಾರಿಗಳನ್ನು ಪ್ರಶ್ನಿಸುತ್ತಿದ್ದಾರೆ.  ನಾಗರಿಕರಿಗೆ ಸಮಸ್ಯೆ ಸೃಷ್ಟಿಸುತ್ತಿರುವ ತ್ಯಾಜ್ಯವನ್ನು ಶೀಘ್ರ ತೆರವುಗೊಳಿಸಬೇ ಕೆಂದೂ ಇಲ್ಲದಿದ್ದಲ್ಲಿ ತೀವ್ರ ಪ್ರತಿಭಟನೆ ನಡೆಸಲಾಗು ವುದೆಂಬ ಮುನ್ನೆಚ್ಚರಿಕೆ ಯನ್ನು ನಾಗರಿಕರು ನೀಡಿದ್ದಾರೆ.

You cannot copy contents of this page