ಪೆರ್ವೋಡಿ ಕುಳಿಯಾರ್‌ನಲ್ಲಿ ತ್ಯಾಜ್ಯಕ್ಕೆ ಬೆಂಕಿ: ಸ್ಥಳೀಯರಿಗೆ ಸಮಸ್ಯೆ

ಪೈವಳಿಕೆ: ಪೈವಳಿಕೆ ಪಂಚಾ ಯತ್‌ನ 7 ವಾರ್ಡ್ ಪೆರ್ವೋಡಿ ಕುಳಿಯಾರ್ ಪರಿಸರದಲ್ಲಿ ತ್ಯಾಜ ವಸ್ತುಗಳನ್ನು ನಿರ್ಜನ ಪ್ರದೇಶದಲ್ಲಿ ತಂದು ಹಾಕಿ ಬೆಂಕಿ ಹಚ್ಚಿರುವುದಾಗಿ ದೂರಲಾಗಿದೆ. ತ್ಯಾಜ್ಯ ರೋಗಗಳನ್ನು ಕೈ ಬೀಸಿ ಕರೆಯುತ್ತಿದೆ. ಈ ಪರಿಸರದಲ್ಲೇ ರೋಗಿಯಾದ ಮಹಿಳೆಯೊಬ್ಬರು ವಾಸವಾಗಿದ್ದು, ಆತಂಕದ ವಾತಾವರಣ ಉಂಟಾಗಿದೆ. ತ್ಯಾಜ್ಯವನ್ನು ಜನವಾಸವಿರುವ ಪ್ರರ್ದೇಶದಲ್ಲಿ ಉಪೇಕ್ಷಿಸಿ ಉರಿಸುವುದರಿಂದ ಪರಿಸರ ನಿವಾಸಿಗಳು ಸಮಸ್ಯೆಗೀಡಾಗಿದ್ದಾರೆ. ನಿನ್ನೆ ಈ ಪ್ರದೇಶಕ್ಕೆ ವಾರ್ಡ್ ಪ್ರತಿನಿದಿ ರಾಮ ಏದಾರ್ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಇಂತವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಸಂಬAಧ ಪಟ್ಟ ಅಧಿಕಾರಿಗಳಲ್ಲಿ ಒತ್ತಾಯಿಸಿದ್ದಾರೆ.

RELATED NEWS

You cannot copy contents of this page