ಯುವತಿ ನಾಪತ್ತೆ

ಕುಂಬಳೆ: ಕುಂಬಳೆಯ ಫ್ಯಾನ್ಸಿ ಅಂಗಡಿಯೊಂದರ ಸೇಲ್ಸ್ ಗರ್ಲ್ ಆಗಿರುವ ಯುವತಿ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಕೊಯಿಪ್ಪಾಡಿ ರಾಜೀವ್ ಗಾಂಧಿ ಕಾಲನಿಯ ನಾರಾಯಣಮಂಗಲ ಹೌಸ್‌ನ  ಹರ್ಷಿತಾ ಯಾನೆ ರೇಖಾ ಡಿ’ಸೋಜಾ (23) ನಾಪತ್ತೆಯಾದ ಯುವತಿ. ಈ ಬಗ್ಗೆ ಪತಿಯ ಸಹೋದರ ಅಕ್ಷತ್ ನೀಡಿದ ದೂರಿನಂತೆ  ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕಳೆದ ಶುಕ್ರವಾರ ಬೆಳಿಗ್ಗೆ ಕುಂಬಳೆಯ ಅಂಗಡಿಗೆ ಕೆಲಸಕ್ಕೆಂದು ತಿಳಿಸಿ ಹೋದ ಯುವತಿ ಬಳಿಕ ಮರಳಿ ಬಂದಿಲ್ಲವೆಂದು ದೂರಿನಲ್ಲಿ ತಿಳಿಸಲಾಗಿದೆ.

You cannot copy contents of this page