ಪುತ್ರಿಯ ಜೊತೆಗೆ ಆಸ್ಪತ್ರೆಗೆಂದು ತೆರಳಿದ ಯುವತಿ ನಾಪತ್ತೆ

ಕಾಸರಗೋಡು: ಎಂಟು ವರ್ಷ ಪ್ರಾಯದ ಪುತ್ರಿಯನ್ನು ಸೇರಿಸಿಕೊಂಡು ಆಸ್ಪತ್ರೆಗೆ ತೆರಳಿದ್ದ ಯುವತಿ ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ಹೊಸದುರ್ಗ ಕುಶಾಲನಗರ ನಿವಾಸಿ ಆಯಿಷತುಲ್ ಸಫೂರ (32) ಪುತ್ರಿಯೊಂದಿಗೆ ನಾಪತ್ತೆಯಾದ ಯುವತಿ. ತಾಯಿ ಕೆ.ಪಿ. ರಹ್ಮಾಬಿಯವರ ದೂರಿನಂತೆ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿದ್ದಾರೆ. ನಿನ್ನೆ ಸಂಜೆ ಆಯಿಷತುಲ್ ಸಫೂರ ಪುತ್ರಿಯನ್ನು ಕರೆದುಕೊಂಡು ಆಸ್ಪತ್ರೆಗೆ ತೆರಳುವುದಾಗಿ ತಿಳಿಸಿ ಮನೆಯಿಂದ ಹೊರ ಹೋಗಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ರಾತ್ರಿ ತಡವಾಗಿಯೂ ಹಿಂತಿರುಗದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಲಾಗಿದೆ.

You cannot copy contents of this page