ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದ ಯುವಕ ಮೃತ್ಯು

ನೀರ್ಚಾಲು: ಬ್ರೈನ್ ಹ್ಯೂಮ ರೇಜ್ ಅಸೌಖ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಫಿನಾನ್ಸ್ ಕಂಪೆನಿ ನೌಕರ ಮೃತಪಟ್ಟರು.  ಆರ್.ಎಸ್.ಎಸ್.ನ ಸಕ್ರಿಯ ಕಾರ್ಯಕರ್ತನಾಗಿದ್ದ   ಕಿಳಿಂಗಾರು ಮುಂಡಾನ್‌ತ್ತಡ್ಕದ  ಲೋಕೇಶ್ (48) ಮೃತಪಟ್ಟ ಯುವಕನಾಗಿದ್ದಾರೆ. ಶ್ರೀರಾಂ ಫಿನಾನ್ಸ್ ಕಂಪೆನಿಯ ನೌಕರನಾಗಿದ್ದ ಲೋಕೇಶ್ ಡಿಸ್ಕ್ ಸಂಬಂಧ ಅಸೌಖ್ಯ ಬಾಧಿಸಿ ಮನೆಯಲ್ಲಿ ಚಿಕಿತ್ಸೆಯಲ್ಲಿದ್ದರು. ನಿನ್ನೆ ಅಸೌಖ್ಯ ಉಲ್ಭಣಗೊಂಡ ಹಿನ್ನೆಲೆಯಲ್ಲಿ ಇವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ರಾತ್ರಿ ವೇಳೆ ನಿಧನ ಸಂಭವಿಸಿದೆ.

ಇವರು ಮಜೀರ್ಪಳ್ಳಕಟ್ಟೆ ಶ್ರೀ ಅಯ್ಯಪ್ಪ ಭಜನಾ ಮಂದಿರದ ಸಕ್ರಿಯ ಕಾರ್ಯಕರ್ತ, ಯುವಕೇಸರಿ ಫ್ರೆಂಡ್ಸ್ ಕ್ಲಬ್ ಕಿಳಿಂಗಾರು, ಸಾಯಿ ಫ್ರೆಂಡ್ಸ್ ಕ್ಲಬ್ ಕಿಳಿಂಗಾರು, ಏಕಲವ್ಯ ಬಾಲಗೋಕುಲದ ಪಾಲನಾ ಸಮಿತಿ ಸದಸ್ಯರಾಗಿದ್ದರು.

 ದಿ| ರಾಮಚಂದ್ರ-ಸುಮತಿ ದಂಪತಿಯ ಏಕೈಕ ಪುತ್ರನಾದ ಮೃತರು ಪತ್ನಿ  ಸುಶ್ಮಿತ (ಎಸ್‌ಬಿಐ ಪಳಯಂಗಾಡಿ ಶಾಖಾ ಮೆನೇಜರ್), ಪುತ್ರಿ ತುಷಾರ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page