ವಿಷ ಸೇವಿಸಿ ಚಿಕಿತ್ಸೆಯಲ್ಲಿದ್ದ ಯುವಕ ನಿಧನ

ಮಂಜೇಶ್ವರ: ವಿಷ ಸೇವಿಸಿ ಚಿಕಿತ್ಸೆಯಲ್ಲಿದ್ದ ಯುವಕ ಮೃತಪಟ್ಟರು. ತಲಪಾಡಿ ಮರಿಯಾಶ್ರಮ ಚರ್ಚ್ ಕಂಪೌಂಡ್ ಬಳಿಯ ನಿವಾಸಿ ಅಶೋಕ ಕ್ರಾಸ್ತ (32) ನಿಧನ ಹೊಂದಿದರು. ಮಂಗಳೂರಿನ ಅಂಗಡಿಯೊಂದರಲ್ಲಿ ನೌಕರನಾಗಿದ್ದ, ಅವಿವಾಹಿತರಾದ ಇವರು ಜನವರಿ 31ರಂದು ರಾತ್ರಿ 8 ಗಂಟೆಗೆ ಮನೆಯಲ್ಲಿ ವಿಷ ಸೇವಿಸಿದ ಸ್ಥಿತಿಯಲ್ಲಿ ಕಂಡು ಬಂದಿದ್ದರು. ಕೂಡಲೇ ದೇರಳಕಟ್ಟೆಯ ಆಸ್ಪತ್ರೆಗೆ ಇವರನ್ನು ದಾಖಲಿಸಲಾಗಿದೆ. ಆದರೆ ನಿನ್ನೆ ಬೆಳಿಗ್ಗೆ ನಿಧನ ಸಂಭವಿಸಿದೆ.

ಮೃತರು ತಂದೆ ಜೋನ್ ಕ್ರಾಸ್ತಾ, ತಾಯಿ ಫ್ಲೋರಿನಾ ಕ್ರಾಸ್ತಾ, ಸಹೋದರರಾದ  ಸಂತೋಷ್ ಕ್ರಾಸ್ತಾ, ಗೋಡ್‌ವಿನ್ ಕ್ರಾಸ್ತಾ, ಸಹೋ ದರಿಯರಾದ ಆಶಾ ಕ್ರಾಸ್ತಾ, ಶಾಂತಿ ಕ್ರಾಸ್ತಾ, ರೇಷ್ಮ ಕ್ರಾಸ್ತಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

You cannot copy contents of this page