ಯುವಕನಿಗೆ ಹಲ್ಲೆ: ಆರೋಪಿ ಬಂಧನ

ಮಂಜೇಶ್ವರ: ಕೊಡ್ಲಮೊಗರು ಸುಂಕದಕಟ್ಟೆ ಓರ್ಕಳ ನಿವಾಸಿ ಹರಿಪ್ರಕಾಶ್ ಡಿ’ಸೋಜಾ (37) ಎಂಬವರಿಗೆ ಹಲ್ಲೆಗೈದ ಪ್ರಕರಣದಲ್ಲಿ ಆರೋಪಿಯಾದ  ಬೋರ್ಕಳದ  ಆರಿಫ್ ಬಿ (38) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತನಿಗೆ ನ್ಯಾಯಾಲಯ ರಿಮಾಂಡ್ ವಿಧಿ ಸಿದೆ.  ಈ ತಿಂಗಳ ೬ರಂದು ಸಂಜೆ ಬೋರ್ಕಳದ ಅಂಗಡಿಯೊಂದರ ಮುಂಭಾಗದಲ್ಲಿ ಹರಿಪ್ರಕಾಶ್ ಡಿ’ಸೋಜಾರನ್ನು ತಡೆದು ನಿಲ್ಲಿಸಿ ಹಲ್ಲೆಗೈದಿರುವುದಾಗಿ ದೂರಲಾಗಿದೆ.  ಈ ಸಂಬಂಧ ಆರಿಫ್ ವಿರುದ್ಧ ಮಂಜೇಶ್ವರ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂ ಡಿದ್ದರು. ಹೊಯ್ಗೆ ಸಾಗಾಟ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿರುವು ದಾಗಿ ಆರೋಪಿಸಿ ಹರಿಪ್ರಕಾಶ್‌ಗೆ ಹಲ್ಲೆಗೈದಿರುವುದಾಗಿ ದೂರಲಾಗಿದೆ.

You cannot copy contents of this page