ಆರೋಗ್ಯ ಸಚಿವೆ ಮನೆ ಬಾಗಿಲಿಗೆ ಪುಷ್ಪಗುಚ್ಛವಿರಿಸಿದ ಯೂತ್ ಕಾಂಗ್ರೆಸ್ ಕಾರ್ಯಕರ್ತರು

ತಿರುವನಂತಪುರ: ಆಲಪ್ಪುಳ ವಂಡಾನಂ ಮೆಡಿಕಲ್ ಕಾಲೇಜಿನಲ್ಲಿ ಶಸ್ತ್ರಚಿಕಿತ್ಸೆ ಮಧ್ಯೆ ಯುವತಿಯ ಹೊಟ್ಟೆಯಲ್ಲಿ ಕತ್ತರಿ ಮರೆತು ಹೋದ ಘಟನೆಯಲ್ಲಿ ಯೂತ್ ಕಾಂಗ್ರೆಸ್ ತೀವ್ರ ಪ್ರತಿಭಟನೆ ಮುಂದುವರಿಸುತ್ತಿದೆ. ಇಂದು ಬೆಳಿಗ್ಗೆ 8 ಗಂಟೆ ವೇಳೆಗೆ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಆರೋಗ್ಯ ಸಚಿವೆ ವೀಣಾ ಜೋರ್ಜ್‌ರ ಮನೆ ಮುಂಭಾಗದಲ್ಲಿ ಪುಷ್ಪಗುಚ್ಚ ಇರಿಸಿದರು. ಮಾಹಿತಿ ತಿಳಿದು ಪೊಲೀಸರು ತಲುಪಿ ಕಾರ್ಯಕರ್ತರನ್ನು ಬಂಧಿಸಿ ಪುಷ್ಪಗುಚ್ಚವನ್ನು ತೆರವುಗೊಳಿಸಿದರು. ಯೂತ್ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯಾಗಿ ತಲುಪುವಾಗ ಸಚಿವೆಯ ಮನೆ ಮುಂಭಾಗದಲ್ಲಿ ಮೂರು ಮಂದಿ ಪೊಲೀಸರು ಮಾತ್ರವಿದ್ದರು. ಇವರನ್ನು ಎದುರಿಸಿ ಕಾರ್ಯಕರ್ತರು ಮನೆಯ ಬಾಗಿಲಲ್ಲಿ ಪುಷ್ಪಗುಚ್ಚವಿರಿಸಿದ್ದಾರೆ. 15 ನಿಮಿಷ ಕಳೆದ ಬಳಿಕ ಹೆಚ್ಚುವರಿ ಪೊಲೀಸರು ತಲುಪಿ ಕಾರ್ಯಕರ್ತರನ್ನು ಅಲ್ಲಿಂದ ಚದುರಿಸಿದ್ದಾರೆ. ಈ ವೇಳೆ ಸಚಿವೆ ಮನೆಯಲ್ಲಿರಲಿಲ್ಲ.

You cannot copy contents of this page