ಅಟ್ಟೆಗೋಳಿ ವಿಷ್ಣುನಗರದಲ್ಲಿ ಬಯಲುಕೋಲ

ಉಪ್ಪಳ: ಅಟ್ಟೆಗೋಳಿ ವಿಷ್ಣುನಗರದಲ್ಲಿ 49ನೇ ವರ್ಷದ ಶ್ರೀ ವಿಷ್ಣುಮೂರ್ತಿ ದೈವದ ಬಯಲು ಕೋಲ ನಡೆಯಿತು. ಗಣಹೋಮ, ಸತ್ಯನಾರಾಯಣ ಪೂಜೆಯೊಂದಿಗೆ ಕಾರ್ಯಕ್ರಮ ಆರಂಭಗೊAಡಿತು. ಅಟ್ಟೆಗೋಳಿ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಿಂದ ಭಂಡಾರ ಆಗಮನದ ಬಳಿಕ ಸ್ಥಳೀಯ ಪ್ರತಿಭೆಗಳಿಂದ ವಿವಿಧ ವಿನೋದಾವಳಿಗಳು, ಮೆಲೇರಿಗೆ ಅಗ್ನಿಸ್ಪರ್ಶ, ಶ್ರೀ ದೈವದ ಕುಳಿಚ್ಚಾಟ್ಟಂ ನಡೆಯಿತು. ಸಾಂಸ್ಕöÈತಿಕ ಕಾರ್ಯಕ್ರಮದಂಗವಾಗಿ ಶಾರದಾ ಆರ್ಟ್್ಸ ತಂಡದ ಐಸಿರಿ ಕಲಾವಿದೆರ್ ಮಂಜೇಶ್ವರ ಇವರಿಂದ ‘ಕಲ್ಜಿಗದ ಮಾಯ್ಕಾರೆ ಪಂಜುರ್ಲಿ’ ನಾಟಕ ಪ್ರದರ್ಶನಗೊಂಡಿತು. ಬಳಿಕ ದೈವದ ಅಗ್ನಿಸೇವೆ ನಡೆಯಿತು.

RELATED NEWS

You cannot copy contents of this page