ಅಪಘಾತಕ್ಕೀಡಾದ ಕಾರಿನಿಂದ ಎಂಡಿಎಂಎ ವಶ: ಮೂವರ ಸೆರೆ
ಪಯ್ಯನ್ನೂರು: ಅಪಘಾತ ಕ್ಕೀಡಾದ ಕಾರಿನಿಂದ ಎಂಡಿಎಂಎ ಪತ್ತೆಹಚ್ಚಲಾಗಿದ್ದು, ಈ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಕಣ್ಣೂರು ಕಾಡಾಚಿ ಕಡಂಬೂರ್‌ನ ಕೆ.ಪಿ. ಶಿಹಾಬು ದ್ದೀನ್ (31), ಕೋ ಟ್ಟೂರು ಕನಿಯಂಡೆವಳಪ್ಪಿಲ್‌ನ ಸಿ.ಕೆ. ನಿಯಾಸ್ (32), ತಾವಕ್ಕರದ ನಿಹಾದ್ ಮೊಹಮ್ಮದ್(30) ಎಂಬಿವರನ್ನು ವಳಪಟ್ಟಣಂ ಪೊಲೀಸ್ ಇನ್‌ಸ್ಪೆಕ್ಟರ್ ಟಿ.ಪಿ. ಸುಮೇಶ್ ನೇತೃತ್ವದಲ್ಲಿ ಬಂಧಿಸಲಾಗಿದೆ. ಮೊನ್ನೆ ರಾತ್ರಿ ಪುದಿಯತೆರು ಎಂಬಲ್ಲಿ ಕಾರು ಅಪಘಾತಕ್ಕೀಡಾಗಿತ್ತು. ಅಪಘಾತದ ಶಬ್ದ ಕೇಳಿ ಅಲ್ಲಿಗೆ ಸ್ಥಳೀಯರು ತಲುಪಿದಾಗ ಕಾರಿ ನಲ್ಲಿದ್ದವರು ಪರಾರಿಯಾಗಿದ್ದರು. ವಿಷಯ ತಿಳಿದು ತಲುಪಿದ ಪೊಲೀಸರು ಕಾರನ್ನು ಕಸ್ಟಡಿಗೆ ತೆಗೆದು ಪರಿಶೀಲಿಸಿದಾಗ 1.88ಗ್ರಾಂ ಎಂಡಿಎಂಎ ಪತ್ತೆಯಾಗಿದೆ. ಅನಂತರ ಗಾಯಗೊಂಡವರನ್ನು ಪತ್ತೆಹಚ್ಚಲು ಪೊಲೀಸರು ವಿವಿಧ ಆಸ್ಪತ್ರೆಗಳಲ್ಲಿ ಶೋಧ ನಡೆಸಿದರೂ ಪತ್ತೆಯಾಗಲಿಲ್ಲ. ಕಾರಿನೊಳಗಿನಿಂದ ಲಭಿಸಿದ ಮೊಬೈಲ್ ಪೋನ್ ನಂಬ್ರವನ್ನು ಪರಿಶೀಲಿಸಿದಾಗ ಪರಾರಿಯಾದವರ ಕುರಿತು ಮಾಹಿತಿ ಲಭಿಸಿದೆ.