ಅಪಘಾತದಲ್ಲಿ ಗಾಯಗೊಂಡ ಇಬ್ಬರು ಬಸ್ ಕಂಡೆಕ್ಟರ್‌ಗಳಿಗೆ ಕಾಸರಗೋಡು ಬಸ್ ಚಂಗ್ಸ್ ವಾಟ್ಸಪ್ ಗ್ರೂಪ್‌ನಿಂದ ಧನ ಸಹಾಯ

ಕಾಸರಗೋಡು: ಕಾಸರಗೋಡು ಬಸ್ ಚಂಗ್ಸ್ ಒಕ್ಕೂಟ (ಕೆ.ಬಿ.ಸಿ) ಅಪಘಾತದಲ್ಲಿ ಗಾಯಗೊಂಡ ಇಬ್ಬರು ಕಂಡಕ್ಟರ್‌ಗಳಿಗೆ ಧನ ಸಹಾಯ ನೀಡಿ ಮಾದರಿಯಾಗಿದೆ. ಚಾಲಿಂಗಾಲ್‌ನಲ್ಲಿ ಮೆಹಬೂಬ್ ಬಸ್ ನಿಯಂತ್ರಣ ತಪ್ಪಿ ಮಗುಚಿ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆಯಲ್ಲಿರುವ ಶಶಿಧರನ್, ಮಾವಿನಕಟ್ಟೆ ಬಳಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಗಾಯಗೊಂಡ ಬಸ್ ಕಂಡಕ್ಟರ್ ದಿನೇಶ್ ಎಂಬವರಿಗೆ ಧನ ಸಹಾಯ ವಿತರಿಸಲಾ ಯಿತು. ಬೈಕ್ ನಿಯಂತ್ರಣ ತಪ್ಪಿ ಹೊಂಡಕ್ಕೆ ಮಗುಚಿದ ಪರಿಣಾಮ ಗಂಭೀರ ಗಾಯಗೊಂಡು ದಿನೇಶ್‌ರ ಪತ್ನಿ ಅನುಷ ಮೃತಪಟ್ಟಿದ್ದರು. ಅವರ ಮೂರು ವರ್ಷ ಪ್ರಾಯದ ಪುತ್ರಿ ಶಿವನ್ಯ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾಳೆ. ಶಿವನ್ಯಳ ಚಿಕಿತ್ಸೆಗಾಗಿರುವ ಧನ ಸಹಾಯ ವನ್ನು ದಿನೇಶ್‌ರಿಗೆ ಕಾಸರಗೋಡಿನಲ್ಲಿ ವಿತರಿಸಲಾಯಿತು.

RELATED NEWS

You cannot copy contents of this page