ಅಪ್ರಾಪ್ತನ ವಾಹನ ಚಲಾವಣೆ: ಆರ್.ಸಿ. ಮಾಲಕನ ವಿರುದ್ಧ ಕೇಸು

ಮಂಜೇಶ್ವರ: ಬಾಲಕರು ವಾಹನ ಚಲಾಸುತ್ತಿರುವುದು ವ್ಯಾಪಕಗೊಂಡಿದ್ದು, ಇದನ್ನು ತಡೆಗಟ್ಟಲು ಮಂಜೇಶ್ವರ ಪೊಲೀ ಸರು ವಾಹನ ತಪಾಸಣೆಯನ್ನು ಬಿಗುಗೊಳಿಸಿದ್ದಾರೆ.
ಇದರಂತೆ ನಿನ್ನೆ ಮಧ್ಯಾಹ್ನ ಸೋಂಕಾಲು ಬಸ್ ನಿಲ್ದಾಣ ಬಳಿಯಲ್ಲಿ ಎಸ್.ಐ ಉಮೇಶ್.ಕೆ.ಆರ್ ನೇತೃತ್ವದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಪೈವಳಿಕೆ ಭಾಗದಿಂದ ಕೈಕಂಬ ಕಡೆಗೆ ಅಪ್ರಾಪ್ತ ಸಂಚರಿಸುತ್ತಿದ್ದ ಸ್ಕೂಟರ್‌ನ್ನು ವಶಕ್ಕೆ ತೆಗೆದು ಕೊಂಡಿದ್ದಾರೆ. ಈ ಸಂಬAಧ ಆರ್.ಸಿ ಮಾಲಕನ ವಿರುದ್ದ ಕೇಸು ದಾಖಲಿಸಲಾಗಿದೆ. ಒಂದು ತಿಂಗಳಲ್ಲಿ ಸುಮಾರು 15ರಷ್ಟು ಅಪ್ರಾಪ್ತರು ದ್ವಿಚಕ್ರ ಸಹಿತ ಇತರ ವಾಹನಗಳು ಚಲಾಯಿಸಿದ ಪ್ರಕರಣಗಳು ದಾಖಲಾಗಿದ್ದು, ಹಗಲು ರಾತ್ರಿ ವಾಹನ ತಪಾಸಣೆ ಯನ್ನು ಬಿಗುಗೊಳಿಸಲಾಗುತ್ತಿರು ವುದಾಗಿ ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page