ಅಮಲು ಪದಾರ್ಥ ಸೇವಿಸಿ ಕಿರುಕುಳ ಕೇಸು ದಾಖಲು

ಉಪ್ಪಳ: ಅಮಲು ಪದಾರ್ಥ ಸೇವಿಸಿ ಸಾರ್ವಜನಿಕವಾಗಿ ಕಿರುಕುಳ ಉಂಟಾಗುವ ರೀತಿಯಲ್ಲಿ ವರ್ತಿಸಿದ ಓರ್ವನ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ,

ಪಾಲಕ್ಕಾಡ್ ಕುನ್ನುಪುರ ನಿವಾಸಿಯೂ ಮೀಯಪದವಿನ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ದೀಪು ಶಶಿಧರನ್ ಕೆ.ಎಸ್. ಎಂಬಾತನ ವಿರುದ್ಧ ಕೇಸು ದಾಖಲಿಸಲಾಗಿದೆ. ಈತ ನಿನ್ನೆ ಸಂಜೆ ಮೀಯಪದವು ಬಸ್ ತಂಗುದಾಣ ಸಮೀಪ ಅಮಲು ಪದಾರ್ಥ ಸೇವಿಸಿ ಸಾರ್ವ ಜನಿಕರಿಗೆ ತೊಂದರೆ ಉಂಟಾ ಗುವ ರೀತಿಯಲ್ಲಿ ವರ್ತಿಸಿದ್ದನು. ಈ ಬಗ್ಗೆ ತಿಳಿದು ಪೊಲೀಸರು ತಲುಪಿ ಆತನನ್ನು ಕಸ್ಟಡಿಗೆ ತೆಗೆದು ಕೇಸು ದಾಖಲಿಸಿಕೊಂಡರು.

You cannot copy contents of this page