ಅರ್ಧ ಕಿಲೋ ಗಾಂಜಾ ಸಹಿತ ಓರ್ವಸೆರೆ

ಕುಂಬಳೆ:  ಮಾರಾಟಕ್ಕಾಗಿ ಕೊಂಡೊಯ್ಯುತ್ತಿದ್ದ ಅರ್ಧಕಿಲೋ ಗಾಂಜಾವನ್ನು ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡು ಓರ್ವನನ್ನು ಬಂಧಿಸಿದ್ದಾರೆ. ಜೋಡುಕಲ್ಲು ಮೊಡಂದೂರು ನಿವಾಸಿ ಗಪ್ಪು ಯಾನೆ ಗಫೂರ್ (೩೧) ಬಂಧಿತ ವ್ಯಕ್ತಿಯೆಂದು ಅಬಕಾರಿ ಅಧಿಕಾರಗಳು ತಿಳಿಸಿದ್ದಾರೆ. ನಿನ್ನೆ ಮಧ್ಯಾಹ್ನ ಗಾಂಜಾ ಸಹಿತ ಬೇಕೂರಿನಲ್ಲಿ ನಿಂತಿರುವ ಬಗ್ಗೆ ಕಾಸರಗೋಡು ಡೆಪ್ಯುಟಿ ಎಕ್ಸೈಸ್ ಕಮಿಷನರ್‌ಗೆ ಮಾಹಿತಿ ಲಭಿಸಿತ್ತು. ಇದರಂತೆ ಇನ್‌ಸ್ಪೆಕ್ಟರ್ ವಿ.ವಿ. ಪ್ರಸನ್ನ ಕುಮಾರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಗಾಂಜಾ ವಶಪಡಿಸಿ ಗಫೂರ್‌ನನ್ನು ಬಂಧಿಸಿದೆ.  ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಪ್ರಿವೆಂಟೀವ್ ಗ್ರೇಡ್ ಆಫೀಸರ್ ರಮೇಶನ್ ಆರ್, ಸಿ.ಇ.ಒಗಳಾದ ರಂಜಿತ್, ಇಂದಿರ ಮೊದಲಾದವರಿದ್ದರು.

You cannot copy contents of this page