ಆಟೋ ರಿಕ್ಷಾದಲ್ಲಿ ಸಾಗಿಸುತ್ತಿದ್ದ ೩.೭೫೦ ಕಿಲೋ ಗಾಂಜಾ ವಶ: ಇಬ್ಬರ ಬಂಧನ

ಕುಂಬಳೆ: ಆಟೋ ರಿಕ್ಷಾದಲ್ಲಿ ಸಾಗಿಸುತ್ತಿದ್ದ ೩.೭೫೦ ಕಿಲೋ ಗಾಂಜಾ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಲ್ಪಾಡಿ ಕುಕ್ಕಾರ್‌ನ ಅಬ್ದುಲ್ ಹಮೀದ್ ಯಾನೆ ಅಮ್ಮಿ(೪೫), ಶಿರಿಯಾದ ಅಬ್ದುಲ್ ಕಬೀರ್ (೩೦) ಎಂಬವರನ್ನು ಕುಂಬಳೆ ಎಸ್‌ಐ ಟಿ.ಎಂ. ವಿಪಿನ್ ಹಾಗೂ ತಂಡ ಬಂಧಿಸಿದೆ.

ಎಸ್‌ಐ ನೇತೃತ್ವದಲ್ಲಿ ನಿನ್ನೆ  ರಾತ್ರಿ  ೭.೩೦ರ ವೇಳೆ ಕುಂಬಳೆ ಶಾಲಾ ರಸ್ತೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಆಟೋ ರಿಕ್ಷಾ ತಲುಪಿದೆ. ಅದನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಗಾಂಜಾ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ತಂಡದಲ್ಲಿ ಎಎಸ್‌ಐ ರಾಮಕೃಷ್ಣನ್, ಪೊಲೀಸರಾದ ಸುರೇಶ್, ಮಹೇಶ್ ಎಂಬಿವರಿದ್ದರು.

You cannot copy contents of this page