ಕಾಸರಗೋಡು: ಬಾವಿಗೆ ಬಿದ್ದ ಆಡನ್ನು ರಕ್ಷಿಸಲು ಬಾವಿಗಿಳಿದ ಯುವಕ ಬಳಿಕ ಮೇಲಕ್ಕೇರಲಾಗದೆ ಅಲ್ಲೇ ಸಿಲುಕಿಕೊಂಡಿದ್ದು, ಬಳಿಕ ಅಗ್ನಿಶಾಮಕದಳ ಆಗಮಿಸಿ ಆತನನ್ನು ಮೇಲಕ್ಕೆತ್ತಿ ರಕ್ಷಿಸಿದ ಘಟನೆ ಚೆಂಗಳದಲ್ಲಿ ನಡೆದಿದೆ. ಚೆಂಗಳ ಅರ್ತಿಪಳ್ಳದ ಸಾಧಿಕ್ (೨೧) ಬಾವಿಯಲ್ಲಿ ಸಿಲುಕಿಕೊಂಡ ಯುವಕ. ಅವರ ಹಿತ್ತಿಲಿನ ಸುಮಾರು ೧೮ ಅಡಿ ಆಳದ ಬಾವಿಗೆ ನಿನ್ನೆ ಸಂಜೆ ಆಡು ಬಿದ್ದಿತ್ತು. ಅದನ್ನು ರಕ್ಷಿಸಲು ಸಾಧಿಕ್ ಬಾವಿಗಿಳಿದಿದ್ದ. ಬಳಿಕ ಮೇಲಕ್ಕೆ ಬರಲು ಸಾಧ್ಯವಾಗಲಿಲ್ಲ. ಆ ಬಗ್ಗೆ ನೀಡಿದ ಮಾ ಹಿತಿಯಂತೆ ಅಗ್ನಿಶಾಮಕ ದಳ ಸಾದಿಕ್‌ನನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿ ಪ್ರಾಣ ರಕ್ಷಿಸಿದ್ದಾರೆ.







