ಆರೋಗ್ಯ ಸಚಿವೆಯ ಕಾರು ಅಪಘಾತ: ಸಚಿವೆಯ ಕೈಗೆ ಗಾಯ

ಮಲಪ್ಪುರಂ: ಭೂಕುಸಿತ ದುರಂತ ಸಂಭವಿಸಿದ ವಯನಾಡ್‌ಗೆ ತೆರಳುತ್ತಿದ್ದ ಆರೋಗ್ಯ ಸಚಿವೆ ವೀಣಾ ಜೋರ್ಜ್‌ರ ವಾಹನ ಅಪಘಾತಕ್ಕೀಡಾಗಿದೆ. ಇಂದು ಬೆಳಿಗ್ಗೆ 7.30ರ ವೇಳೆ ಮಂಜೇರಿಯಲ್ಲಿ ಅಪಘಾತವುಂಟಾಗಿದೆ. ಎದುರಿನಿಂದ ಬಂದ ಸ್ಕೂಟರ್‌ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಯತ್ನಿಸಿದಾಗ ಸಚಿವೆಯ ಕಾರು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ. ಕೈಗೆ ಗಾಯಗೊಂಡ ಸಚಿವೆಯನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಜತೆಗಿದ್ದವರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

RELATED NEWS

You cannot copy contents of this page