ಉಚಿತ ಆಯುರ್ವೇದ ವೈದ್ಯಕೀಯ ಶಿಬಿರಕ್ಕೆ ಚಾಲನೆ

ಕಾಸರಗೋಡು: ನಗರಸಭೆ ಹಾಗೂ ಸರಕಾರಿ ಆಯುರ್ವೇದ ಆಸ್ಪತ್ರೆಯ ಜಂಟಿ ಆಶ್ರಯದಲ್ಲಿ ಮಳೆಗಾಲ ರೋಗಗಳ ವಿರುದ್ಧ ವಿವಿಧ ವಲಯಗಳಲ್ಲಿ ಹಮ್ಮಿಕೊಳ್ಳುವ ಉಚಿತ ವೈದ್ಯಕೀಯ ಶಿಬಿರಕ್ಕೆ ಚಾಲನೆ ನೀಡಲಾಗಿದೆ. ನೆಲ್ಲಿಕುಂಜೆ ವಲಯದಲ್ಲಿ ಎಯುಎಯುಪಿ ಶಾಲೆಯಲ್ಲಿ ನಡೆದ ಮೊದಲ ಶಿಬಿರವನ್ನು ನಗರಸಭಾ ಅಧ್ಯಕ್ಷ ಅಬ್ಬಾಸ್ ಬೇಗಂ ಉದ್ಘಾಟಿಸಿದರು. ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಖಾಲಿದ್ ಪಚ್ಚಕಾಡ್ ಅಧ್ಯಕ್ಷತೆ ವಹಿಸಿದರು. ನಗರಸಭಾ ಕೌನ್ಸಿಲರ್ ಅಬ್ದುಲ್ ರಹ್ಮಾನ್, ಡಾ| ಇನ್ಸಿಗಾರ್ಗಿ, ಶಾಲೆಯ ಎನ್.ಎಂ. ಸುಬೈರ್, ಅಬ್ದು ತೈಯ್ಯವಳಪ್ಪ್, ಮುಖ್ಯೋಪಾಧ್ಯಾದ ಯರಾದ ಗೋಪಿನಾಥ್ ಮಾತನಾಡಿದರು. ಡಾ| ಲೌಲಿ ಫಿಲಿಪ್ ಸ್ವಾಗತಿಸಿ, ಕಮರುದ್ದೀನ್ ವಂದಿಸಿದರು.

RELATED NEWS

You cannot copy contents of this page