ಉದ್ಯೋಗ ಭರವಸೆ ನೀಡಿ ಅಸ್ಸಾಂನಿಂದ ಬಾಲಕಿಯನ್ನು ಕೇರಳಕ್ಕೆ ತಲುಪಿಸಿ ಅನೈತಿಕ ದಂಧೆ: ಯುವಕ, ಪ್ರಿಯತಮೆ ಬಂಧನ

ಕಲ್ಲಿಕೋಟೆ: ಉದ್ಯೋಗದ ಭರವಸೆ ಒಡ್ಡಿ ಅಸ್ಸಾಂ ನಿವಾಸಿಯಾದ 17ರ ಹರೆಯದ ಬಾಲಕಿಯನ್ನು ಕೇರಳಕ್ಕೆ ತಲುಪಿಸಿ ಅನೈತಿಕ ಚಟುವಟಿಕೆ ನಡೆಸಿದ ಯುವಕ ಹಾಗೂ ಪ್ರಿಯತಮೆಯನ್ನು ಕಲ್ಲಿಕೋಟೆ ನಗರ ಪೊಲೀಸರು ಬಂಧಿಸಿದ್ದಾರೆ. ಅಸ್ಸಾಂ ನಿವಾಸಿಗಳಾದ ಫುರ್ಖಾನ್ ಅಲಿ(26), ಆಕ್ಸೀಮಾ ಖಾತುನ್ (24) ಬಂಧಿತ ಆರೋಪಿಗಳು. ಇನ್ಸ್ಟಾಗ್ರಾಂ ಮೂಲಕ ಇವರು ಬಾಲಕಿಯನ್ನು ಪರಿಚಯ ಮಾಡಿಕೊಂಡಿದ್ದರು. ಬಳಿಕ ಕೇರಳದಲ್ಲಿ ಮನೆ ಕೆಲಸ ದೊರಕಿಸಿ ಕೊಡುವುದಾಗಿ ಭರವಸೆ ನೀಡಿ ಬಾಲಕಿಯನ್ನು ಅಸ್ಸಾಂ ನಿಂದ ಕೇರಳಕ್ಕೆ ಕರೆದುಕೊಂಡು ಬಂದಿದ್ದಾರೆ. ಅನಂತರ ಕಲ್ಲಿಕೋಟೆ ರೈಲ್ವೇ ನಿಲ್ದಾಣ ಬಳಿಯ ಲಾಡ್ಜ್ ನಲ್ಲಿ ಕೂಡಿಹಾಕಿ ಅನೈತಿಕ ಚಟುವಟಿಕೆ ನಡೆಸಿರುವುದಾಗಿ ದೂರಲಾಗಿದೆ. ಬಾಲಕಿಯನ್ನು ಹಲವರಿಗೆ ಒಪ್ಪಿಸಿ ಅದರ ವೀಡಿಯೋ ಚಿತ್ರೀಕರಿಸಿ ಬೆದರಿಕೆಯೊಡ್ಡಿದ್ದಾರೆ. ಹಣ ಸಂಪಾದಿಸುವ ಉದ್ದೇಶದಿಂದ ಆರೋಪಿಗಳು ಬಾಲಕಿಯನ್ನು ಇಲ್ಲಿಗೆ ತಂದು ಆಕೆಗೆ ವಂಚನೆ ಎಸಗಿದ್ದಾರೆ. ಈ ಪ್ರಕರಣ ಪೊಲೀಸರ ಅರಿವಿಗೆ ಬಂದು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಂತೆ ಆರೋಪಿಗಳು ಕೇರಳದಿಂದ ಪರಾರಿಯಾದರು. ಒಡಿಸ್ಸಾದ ಬದ್ರಕ್ ರೈಲ್ವೇ ನಿಲ್ದಾಣ ಬಳಿ ಇದ್ದಾರೆಂಬ ಗುಪ್ತ ಮಾಹಿತಿ ಲಭಿಸಿದ ಕಲ್ಲಿಕೋಟೆ ಪೊಲೀಸರು ಅಲ್ಲಿಗೆ ತೆರಳಿ ಅವರನ್ನು ಬಂಧಿಸಿದ್ದಾರೆ.
ಆರೋಪಿಗಳಿಗೆ ಯಾರಾದರೂ ಸಹಾಯ ಒದಗಿಸಿದ್ದಾರೆಯೇ ಎಂದು ತನಿಖೆ ನಡೆಯಲಿದೆ. ಅಲ್ಲದೆ ಬಾಲಕಿಗೆ ದೌರ್ಜನ್ಯಗೆೆÊದವರನ್ನು ಪತ್ತೆ ಹಚ್ಚಲು ತನಿಖೆ ತೀವ್ರಗೊಳಿಸುವ ಸಾಧ್ಯತೆ ಇದೆ.

You cannot copy contents of this page