ಉಪ್ಪಳ ಗೇಟ್‌ನಲ್ಲಿ ನೂತನ ರೈಲ್ವೇ ಪ್ಲೈ ಓವರ್ ನಿರ್ಮಾಣಕ್ಕೆ ಶಂಕುಸ್ಥಾಪನೆ

ಉಪ್ಪಳ: ಕೇಂದ್ರ ರೈಲ್ವೇ ಇಲಾಖೆಯ “ಅಮೃತ್ ಭಾರತ್ ಸ್ಟೇಶನ್ ಸ್ಕೀಂ” ನ ಅಂಗವಾಗಿ ಉಪ್ಪಳ ರೈಲ್ವೇ ಗೇಟಿನ (ಉಪ್ಪಳ ಗೇಟ್) ಸಮೀಪದಲ್ಲಿ ನೂತನ ರೈಲ್ವೇ ಫ್ಲೈ ಓವರ್ ಕಾಮಗಾರಿಯ ಶಂಕುಸ್ಥಾಪನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ನಿನ್ನೆ ಮಧ್ಯಾಹ್ನ ಆಲ್‌ಲೈನ್ ಮೂಲಕ ನೆರವೇರಿಸಿದರು. ಉಪ್ಪಳ ರೈಲ್ವೇ ಗೇಟ್ ಪರಿಸರದಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಪಾಲಕ್ಕಾಡ್ ಡಿವಿಶನ್ ರೈಲ್ವೇ ಅಧಿಕಾರಿಗಳು, ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಶಮೀನ ಟೀಚರ್, ಉಪಾಧ್ಯಾಕ್ಷ ಹನೀಫ್.ಪಿ.ಕೆ, ಮಂಗಲ್ಪಾಡಿ ಪಂಚಾಯತ್ ಅಧ್ಯಕ್ಷೆ ರುಬೀನ ನೌಫಲ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಪಂಚಾಯತ್ ಸದಸ್ಯ ವಿಜಯ ಕುಮಾರ್ ರೈ, ವಾರ್ಡ್ ಲ್ಣÃ~¬ಬಿ ಮೊಹಮ್ಮದ್ ಹುಸೈನ್, ಪಂಚಾಯತ್ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಇರ್ಫಾನ, ರಫೀಕ್ ಉಪಸ್ಥಿತರಿದ್ದರು. ಶುಭಾಂಶನೆಯನ್ನು ನೀಡಿದರು. ಆದರ್ಶ್ ಬಿ ಎಂ, ಸುನಿಲ್ ಅನಂತ ಪುರ, ಲೋಕೇಶ್ ನೋಂಡ, ಕಿಶೋರ್ ಭಗವತಿ, ಜಯಂತಿ ಶೆಟ್ಟಿ , ರಂಜಿತ್ ಶಾರದಾ ನಗರ, ಗೋಲ್ಡನ್ ರಹಿಮಾನ್ ಉಪಸ್ಥಿತರಿದ್ದರು.

You cannot copy contents of this page