ಉಳುವಾರ್‌ನಲ್ಲಿ ಉರೂಸ್ ವಾರ್ಷಿಕ ಹರಕೆ, ಮಜ್ಲೀಸ್ ನಾಳೆ

ಕುಂಬಳೆ: ಸಮಸ್ತದ ಅಧ್ಯಕ್ಷರಾಗಿದ್ದ  ತಾಜುಲ್ ಉಲಮ ಅಬ್ದುಲ್ ರಹ್‌ಮಾನ್ ಅಲ್ ಬುಖಾರಿ, ನೂರುಲ್ ಉಲಾಮ ಎಂ.ಎ, ಅಬ್ದುಲ್ ಖಾದಿರ್ ಮುಸ್ಲಿಯಾರ್ ಎಂಬಿವರ ಸ್ಮರಣಾರ್ಥ ಕೇರಳ ಮುಸ್ಲಿಂ ಜಮಾಯತ್, ಎಸ್‌ವೈಎಸ್, ಎಸ್‌ಎಸ್‌ಎಫ್ ಉಳುವಾರ್ ಯೂನಿಟ್ ಸಮಿತಿಗಳ ಜಂಟಿ ಆಶ್ರಯದಲ್ಲಿ ಉರೂಸ್ ವಾರ್ಷಿಕ ಹರಕೆ ನಾಳೆ ವಿವಿಧ ಕಾರ್ಯಕ್ರಮ ಗಳೊಂದಿಗೆ ನಡೆಯಲಿದೆ. ಈ ಬಗ್ಗೆ ಕುಂಬಳೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಪದಾಧಿಕಾರಿಗಳು ತಿಳಿಸಿದ್ದಾರೆ.

ಇದರಂಗವಾಗಿ ನಡೆಯುವ ಮಜ್ಲೀಸ್‌ಗೆ ಅಬ್ದುಲ್ ಲತೀಫ್ ಸಖಾಫಿ ಕಾಂತಪುರಂ ನೇತೃತ್ವ ನೀಡುವರು. ಇಂದು ಇಸ್ಮಾಯಿಲ್ ಅಲ್ ಬುಖಾರಿ, ಕುಂಬೋಳ್ ಫಸಲ್ ಪೂಕೋಯ ತಂಙಳ್ ಅಹ್ದಲ್ ತಂಙಳ್ ಮಖಾಂಗಳಲ್ಲಿ ನಡೆಯುವ ಸಿಯಾರತ್‌ಗೆ ಅಶ್ರಫ್ ಸಖಾಫಿ ಉಳುವಾರ್, ಮುಸ್ತಫ ಸಖಾಫಿ ಬತ್ತೇರಿ, ಶಾಕಿರ್ ಸಅದಿ ಉಳುವಾರ್ ನೇತೃತ್ವ ನೀಡುವರು. ನಾಳೆ ಸಂಜೆ  ಧ್ವಜಾರೋಹಣ ನಡೆಯಲಿದೆ. ಬಳಿಕ ಮಜ್ಲೀಸ್  ನಡೆಯಲಿದೆ. ಎಸ್‌ಎಸ್‌ಎಫ್ ರಾಜ್ಯ ಫೈನಾನ್ಸ್ ಕಾರ್ಯದರ್ಶಿ ಮುನೀರ್ ಅಹ್‌ದಲ್ ತಂಙಳ್ ಉದ್ಘಾಟಿಸುವರು. ೧೦ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಕೇರಳ ಮುಸ್ಲಿಂ ಜಮಾಯತ್ ಜಿಲ್ಲಾ ಅಧ್ಯಕ್ಷ ಬಿ.ಎಸ್. ಅಬ್ದುಲ್ ಕುಂಞಿ ಫೈಸಿ ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲಾ ಕಾರ್ಯದರ್ಶಿ ಪಳ್ಳಂಗೋಡ್ ಅಬ್ದುಲ್ ಮದನಿ ಉದ್ಘಾಟಿಸುವರು. ಹಲವರು ಭಾಗವಹಿಸುವರು. ಈ ಬಗ್ಗೆ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಅಬ್ಬಾಸ್ ಮಮ್ಮಾಲಿ, ಮೊಹಮ್ಮದ್ ಕುಂಞಿ ಉಳುವಾರ್, ಅಶ್ರಫ್ ಸಖಾಫಿ, ಅಬ್ದುಲ್ ರಹ್‌ಮಾನ್ ಕೊಡುವ, ಸಿದ್ದಿಕ್ ಯು.ಎ ಭಾಗವಹಿಸಿದರು.

You cannot copy contents of this page