ಎಂಡಿಎಂಎ ಸಹಿತ ಯುವಕ ಸೆರೆ

ಕಾಸರಗೋಡು: ಭಾರೀ ಮಾದಕಪದಾರ್ಥವಾದ ಎಂಡಿಎಂಎ ಮಾರಾಟ ಜಿಲ್ಲೆಯಲ್ಲಿ ದಿನೇ ದಿನೇ ತೀವ್ರಗೊಳ್ಳುತ್ತಿದ್ದು ಅದರ ವಿರುದ್ಧ ಪೊಲೀಸರು ಮತ್ತು ಅಬಕಾರಿ ದಳ ಜಿಲ್ಲೆಯಾದ್ಯಂತ ನಡೆಸುತ್ತಿರುವ ತನ್ನ ಕಾರ್ಯಾ ಚರಣೆಯನ್ನು ಇನ್ನಷ್ಟು ತೀವ್ರಗೊಳಿಸಿದ್ದಾರೆ. ಇದರಂತೆ ಚಂದೇರ ಪೊಲೀಸ್ ಠಾಣೆಯ ಎಸ್‌ಐ ಎಂ.ವಿ. ಶ್ರೀದಾಸನ್‌ರ ನೇತೃತ್ವದ ಪೊಲೀಸರು ತೃಕ್ಕರಿಪುರ ಆಯಟ್ಟಿಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಒಂದೂವರೆ ಗ್ರಾಂ ಎಂಡಿಎಂಎ ಸಹಿತ ಯುವಕ ನನ್ನು ಬಂಧಿಸಿದೆ.

ತೃಕ್ಕರಿಪುರ ಆಯಿಟ್ಟಿ ಪಳ್ಳಿವಳಪ್ಪಿಲ್  ವೀಟಿಲ್‌ನ ಪಿ.ವಿ. ಮೊಹಮ್ಮದ್ ಸಬ್‌ಹಾನ್ (೨೫) ಬಂಧಿತ ಆರೋಪಿ ಇಂತಹ ಕಾರ್ಯಾಚರಣೆಯನ್ನು ಪೊಲೀಸರು ಇನ್ನಷ್ಟು ತೀವ್ರಗೊಳಿಸಿದ್ದಾರೆ.

RELATED NEWS

You cannot copy contents of this page