ಎಕೆಜಿಎಸ್‌ಎಂಎ ಕಾಸರಗೋಡು ಘಟಕ ಮಹಾಸಭೆ, ನೂತನ ಪದಾಧಿಕಾರಿಗಳ ಆಯ್ಕೆ
ಕಾಸರಗೋಡು: ಎಕೆಜಿಎಸ್‌ಎಂಎ ಕಾಸರಗೋಡು ಘಟಕದ ಮಹಾಸಭೆ ಘಟಕಾಧ್ಯಕ್ಷ ಜಿ.ವಿ. ನಾರಾಯಣನ್‌ರ ಅಧ್ಯಕ್ಷತೆಯಲ್ಲಿ ಜರಗಿತು. ಜಿಲ್ಲಾಧ್ಯಕ್ಷ ಅಬ್ದುಲ್ ಕರೀಂ ಸಿಟಿಗೋಲ್ಡ್ ಉದ್ಘಾಟಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೋಡೋತ್ ಅಶೋಕನ್ ನಾಯರ್ ಪ್ರಧಾನ ಭಾಷಣ ಮಾಡಿದರು. ಜಿಲ್ಲಾ ಕೋಶಾಧಿಕಾರಿ ಬಿ.ಎಂ. ಅಬ್ದುಲ್ ಕಬೀರ್ ಶುಭ ಕೋರಿದರು. ಘಟಕ ಪ್ರಧಾನ ಕಾರ್ಯದರ್ಶಿ ಅಭಿಲಾಷ್ ಕೆ.ವಿ. ವರದಿ ಮಂಡಿಸಿದರು. ಕೋಶಾಧಿಕಾರಿ ಎಂ.ಎಂ. ಸೈದ್ ಇಬ್ರಾಹಿಂ 2023-2024ನೇ ವರ್ಷದ ಲೆಕ್ಕ ಪತ್ರ ಮಂಡಿಸಿದರು. ಗ್ರಾಹಕರನ್ನು ವಂಚಿಸುವ ರೀತಿಯಲ್ಲಿ ಜಾಹೀರಾತು ನೀಡುವ ವ್ಯಾಪಾರಿಗಳನ್ನು ದೂರವಿಡಲು ತೀರ್ಮಾನಿಸಲಾಯಿತು. ನೂತನ ವರ್ಷದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಜಿ.ವಿ. ನಾರಾಯಣನ್ (ಮಿಥುನ್ ಜ್ಯುವೆಲ್ಲರಿ), ಪ್ರಧಾನ ಕಾರ್ಯದರ್ಶಿಯಾಗಿ ಪ್ರದೀಪ್ ಜೋಯ್ (ಪಿ.ಎನ್.ಎಂ. ಗೋಲ್ಡ್), ಕೋಶಾಧಿಕಾರಿಯಾಗಿ ಎಂ.ಎಂ. ಸೈದ್ ಇಬ್ರಾಹಿಂ (ಬಿಸ್ಮಿ ಗೋಲ್ಡ್), ಉಪಾಧ್ಯಕ್ಷರಾಗಿ ಮೈಮೂದ್ ಅರಮನ, ಜೋರ್ಜ್ ಸಿಟಿ, ಮಧುಸೂದನನ್ ಸಿಟಿ, ಜೊತೆ ಕಾರ್ಯದರ್ಶಿಗಳಾಗಿ ಮಹೇಶ್ ಮಾಳವಿಕ, ಸತೀಶನ್ ವಿಶ್ವಾಸ್‌ರನ್ನು ಆಯ್ಕೆ ಮಾಡಲಾಯಿತು. ಅಭಿಲಾಷ್ ಕೆ.ವಿ. ಸ್ವಾಗತಿಸಿ, ಪ್ರದೀಪ್ ಜೋಯ್ ವಂದಿಸಿದರು.