ಎಟಿಎಂನೊಳಗೆ ಸಿಲುಕಿದ ತಾಯಿ, ಪುತ್ರಿ: ಅಗ್ನಿಶಾಮಕದಳದಿಂದ ರಕ್ಷಣೆ

ಕಾಸರಗೋಡು: ಎಟಿಎಂ ಕೇಂದ್ರಕ್ಕೆ ಹಣ ತೆಗೆಯಲು ಹೋದ ವೇಳೆ ಅದರ ಬಾಗಿಲು ಲಾಕ್‌ಗೊಂಡು  ಹೊರಬ ರಲು ಸಾಧ್ಯವಾಗದೆ ಸಂಕಷ್ಟದಲ್ಲಿ ಸಿಲುಕಿ ಕೊಂಡಿದ್ದ ತಾಯಿ ಮತ್ತು  ಆಕೆಯ ಎಂಟು ವರ್ಷದ ಪುತ್ರಿಯನ್ನು ಕಾಸರ ಗೋಡು ಅಗ್ನಿಶಾಮಕದಳ ರಕ್ಷಿಸಿದ ಘಟನೆ ನಗರದಲ್ಲಿ ನಿನ್ನೆ ಸಂಜೆ ನಡೆದಿದೆ.

ನಗರದ ಹಳೆ ಬಸ್ ನಿಲ್ದಾಣ ಪರಿಸರದ   ಬ್ಯಾಂಕೊಂದರ ಎಟಿಎಂ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಹಣ ತೆಗೆಯಲು ತಾಯಿ ಮತ್ತು ಪುತ್ರಿ ಎಂಟಿಎಂ ಕೇಂದ್ರದೊಳಗೆ ಪ್ರವೇಶಿಸಿ    ಬಾಗಿಲನ್ನು ಒಳಗಿನಿಂದ ಮುಚ್ಚಿದ್ದರು. ಆದರೆ ಅದನ್ನು  ಬಳಿಕ ತೆರೆಯಲು ಅವರಿಗೆ ಸಾಧ್ಯವಾಗಲಿಲ್ಲ. ಅದನ್ನು ಕಂಡ ಪೊಲೀಸರು ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದರು. ಅದರಂತೆ  ಉಸ್ತುವಾರಿ ಸ್ಟೇಷನ್ ಆಫೀಸರ್ ಸಂತೋಷ್ ಕುಮಾರ್ ನೇತೃತ್ವದ ಕಾಸರಗೋಡು ಅಗ್ನಿಶಾಮಕದಳ ತಕ್ಷಣ ಆಗಮಿಸಿ ಆಧುನಿಕ ಉಪಕರಣ ಬಳಸಿ ಎಟಿಎಂ ಕೇಂದ್ರದ ಬಾಗಿಲ ಲಾಕ್‌ನ್ನು ತುಂಡರಿಸಿ ತೆಗೆದು ತಾಯಿ ಮತ್ತು ಪುತ್ರಿಯನ್ನು ಹೊರಬರಲು ಸಹಕರಿಸಿದರು.

RELATED NEWS

You cannot copy contents of this page