ಎಡರಂಗ ಸರಕಾರದಿಂದ ದುಂದುವೆಚ್ಚ-ಕಾಂಗ್ರೆಸ್ ಆರೋಪ

ಪೈವಳಿಕೆ: ಕೇರಳದ ಎಡರಂಗ ಸರಕಾರ ಜನಸಾಮಾನ್ಯರನ್ನು ಮರೆತು ಆಡಳಿತ ನಡೆಸುತ್ತಿದ್ದು ದುಂದುವೆಚ್ಚ ಹಾಗೂ ಸ್ವಜನಪಕ್ಷಪಾತದಿಂದ ಕೂಡಿದ ಆಡಳಿತ ಜನಸಾಮಾನ್ಯರಿಗೆ ಹೊರೆಯಾಗಿದೆ ಎಂದು ಯು ಡಿ ಎಫ್ ವಿಧಾನಸಭಾ ಕ್ಷೇತ್ರ ಸಂಚಾಲಕ ಮಂಜುನಾಥ ಆಳ್ವ ನುಡಿದರು. ಯು ಡಿ ಎಫ್ ರಾಜ್ಯ ಸಮಿತಿ ಆಹ್ವಾನದಂತೆ ರಾಜ್ಯದಾದ್ಯಂತ ಪಂಚಾಯತು ಮಟ್ಟದಲ್ಲಿ ನಡೆದ ಅಹೋ ರಾತ್ರಿ ಮುಷ್ಕರವನ್ನು ಪೈವಳಿಕೆಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ಪಂಚಾಯತುಗಳ ಅನುದಾನವನ್ನು ಕಡಿತಗೊಳಿಸಿ ಪಂ. ಆಡಳಿತದ ಕತ್ತು ಹಿಸುಕುವ ಕೆಲಸ ರಾಜ್ಯ ಸರಕಾರ ನಡೆಸುತ್ತಿದೆ ಎಂದು ಅವರು ಆರೋಪಿಸಿದರು. ಯು ಡಿ ಎಫ್ ಪೈವಳಿಕೆ ಪಂಚಾಯತು ಚಯರ್ ಮೇನ್ ವಸಂತಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎ.ಕೆ.ಎಂ. ಅಶ್ರಫ್ ಪ್ರಧಾನ ಭಾಷಣ ಮಾಡಿದರು. ಯು ಡಿ ಎಫ್ ನಾಯಕರಾದ ಅಸೀಸ್ ಮರಿಕ್ಕೆ, ಎ. ಕೆ.ಆರಿಫ್, ಲಕ್ಷ್ಮಣ ಪ್ರಭು, ಮೋಹನ ರೈ ಕಯ್ಯಾರು, ಅಸೀಸ್ ಕಳಾಯಿ, ಮೊಹಮ್ಮದ್ ಮಾಸ್ತರ್, ರಾಘವೇಂದ್ರ ಭಟ್, ಶಾಜಿ ಎನ್ ಸಿ , ಹಮೀದ್, ಬ್ಲೋಕ್ ಪಂ. ಸದಸ್ಯೆ ಫಾತಿಮತ್ ಜುಹರಾ ಮಾತನಾಡಿದರು. ಝಡ್. ಎ. ಕಯ್ಯಾರ್ ಸ್ವಾಗತಿಸಿ, ನಾರಾಯಣ ಏದಾರ್ ವಂದಿಸಿದರು. ಹನೀಫ್ ಹಾಜಿ, ಅಬ್ದುಲ್ಲ ಹಾಜಿ, ಗಂಗಾಧರ ನಾಯ್ಕ್, ಆದಂ ಬಳ್ಳೂರು, ಅಸೀಸ್ ಚೇವಾರ್, ನೌಶಾದ್ ಕಯ್ಯಾರು, ಸಚ್ಚಿದಾನಂದ ರೈ, ಪೀಟರ್ ಡಿ ಸೋಜ ಮೊದಲಾದವರು ನೇತೃತ್ವ ನೀಡಿದರು.

RELATED NEWS

You cannot copy contents of this page