ಎನ್‌ಟಿಯುನಿಂದ ರಾಮಾಯಣ ಮಾಸಾಚರಣೆ, ವನಿತಾ ಸಂಗಮ 9ರಂದು
ಕಾಸರಗೋಡು: ದೇಶೀಯ ಅಧ್ಯಾಪಕ ಪರಿಷತ್ ಕಾಸರಗೋಡು ವನಿತಾ ವಿಭಾಗ ಇದರ ಆಶ್ರಯದಲ್ಲಿ ವನಿತಾ ಸಂಗಮ, ರಾಮಾಯಣ ಮಾಸಾಚರಣೆ ಈ ತಿಂಗಳ 9ರಂದು ಬೆಳಿಗ್ಗೆ 10 ಗಂಟೆಗೆ ಕೂಡ್ಲು ಎನ್‌ಟಿಯು ಕಾರ್ಯಾಲಯದಲ್ಲಿ ನಡೆಯಲಿದೆ. ಮಧೂರು ಪಂ. ಸದಸ್ಯೆ ರಾಧಾ ಉದ್ಘಾ ಟಿಸುವರು. ಸಾಮಾಜಿಕ ಕಾರ್ಯಕರ್ತ ಮುರಳೀಧರ ಯಾದವ್ ನಾಯ್ಕಾಪು ಮಾತನಾಡುವರು. ವನಿತಾ ವಿಭಾಗದ ಸಂಚಾಲಕಿ ದಿವ್ಯಾ ಕದ್ರಿ ಅಧ್ಯಕ್ಷತೆ ವಹಿಸುವರು. ಎನ್‌ಟಿಯು ಜಿಲ್ಲಾ ಸಮಿತಿ ಅಧ್ಯಕ್ಷ ಕೃಷ್ಣನ್ ಟಿ, ರಾಜ್ಯ ಸಮಿತಿ ಉಪಾಧ್ಯಕ್ಷ ಪ್ರಭಾಕರನ್ ನಾಯರ್ ಶುಭ ಕೋರುವರು. ಸುಚಿತಾ ಐಲ್, ವಿದ್ಯಾ, ಚಂದ್ರಿಕಾ ಭಾಗವಹಿಸುವರು.