ಎಸ್‌ಎಫ್‌ಐ ಭಯೋತ್ಪಾದಕ ಸಂಘಟನೆಯಂತೆ ವರ್ತಿಸುತ್ತಿದೆ- ಕೆ. ಸುರೇಂದ್ರನ್

ಕಲ್ಲಿಕೋಟೆ: ಎಸ್‌ಎಫ್‌ಐ ಭಯೋತ್ಪಾದಕ ಸಂಘಟನೆಯಂತೆ ವರ್ತಿಸುತ್ತಿದೆಯೆಂದು ಬಿಜೆಪಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ಆರೋಪಿಸಿದ್ದಾರೆ. ಕ್ಯಾಂಪಸ್‌ಗಳಲ್ಲಿ ಎಸ್‌ಎಫ್‌ಐ ನಡೆಸುವ ಆಕ್ರಮಣಗಳು ಭೀಕರ ಸನ್ನಿವೇಶವನ್ನು ಸೃಷ್ಟಿಸುತ್ತಿದೆಯೆಂದೂ ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಾ ತಿಳಿಸಿದರು. ವಿದ್ಯಾರ್ಥಿಗಳನ್ನು ಮಾತ್ರವಲ್ಲ ಪ್ರಾಂಶುಪಾಲ ಹಾಗೂ ಅಧ್ಯಾಪಕರನ್ನು ಎಸ್‌ಎಫ್‌ಐ ಕಾರ್ಯಕರ್ತರು ಆಕ್ರಮಿಸಿ ಬೆದರಿಕೆಯೊಡ್ಡುತ್ತಿದ್ದಾರೆ. ಕೊಯಿಲಾಂಡಿ ಗುರುದೇವ ಕಾಲೇಜಿನಲ್ಲಿ ಪ್ರಾಂಶುಪಾಲರ ಮುಖಕ್ಕೆ ಹೊಡೆಯುವ ದೃಶ್ಯ ಬಹಿರಂಗಗೊಂಡರೂ ಸರಕಾರ ಆರೋಪಿಗಳಿಗೆ ಸಂರಕ್ಷಣೆಯೊದಗಿಸುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಉಂಟಾದ ದಯನೀಯ ಪರಾಭವದಿಂದ ಸಿಪಿಎಂ ಪಾಠ ಕಲಿಯುತ್ತಿಲ್ಲ ಎಂಬುವುದು ಎಸ್‌ಎಫ್‌ಐಯ ಚಟುವಟಿಕೆಗಳಿಂದ ಸಾಬೀತುಗೊಳ್ಳುತ್ತಿದೆ. ತಪ್ಪುಗಳನ್ನು ತಿದ್ದುವುದಾಗಿ ತಿಳಿಸುವ ಸಿಪಿಎಂ ಅದಕ್ಕೆ ಕ್ರಮ ಕೈಗೊಳ್ಳಬೇಕಾಗಿದೆ. ಮುಖ್ಯ ಮಂತ್ರಿ ಮೌನ ತೊರೆಯಬೇಕೆಂದೂ ಸುರೇಂದ್ರನ್ ಆಗ್ರಹಪಟ್ಟರು.

RELATED NEWS

You cannot copy contents of this page