ಎಸ್ಎಫ್ಐ ರಾಜ್ಯ ವ್ಯಾಪಕ ಶಿಕ್ಷಣ ಬಂದ್ ಇಂದು
ತಿರುವನಂತಪುರ: ರಾಜ್ಯದಲ್ಲಿ ಇಂದು ಎಸ್ಎಫ್ಐಯ ಶಿಕ್ಷಣ ಬಂದ್ ನಡೆಸಲಾಗುತ್ತಿದೆ. ಉನ್ನತ ಶಿಕ್ಷಣ ವಲಯವನ್ನು ಕೇಸರೀಕರಣಗೊಳಿಸಲಿರುವ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಕ್ರಮದ ವಿರುದ್ಧ ಪ್ರತಿಭಟಿಸಿದ ಎಸ್ಎಫ್ಐ ಮುಖಂಡರನ್ನು ಬಂಧಿಸಿದ ಹಿನ್ನೆಲೆಯಲ್ಲಿ ಶಿಕ್ಷಣ ಬಂದ್ಗೆ ಆಹ್ವಾನ ನೀಡಲಾಗಿದೆ. ರಾಜ್ಯದ ಉನ್ನತ ಶಿಕ್ಷಣ ವಲಯವನ್ನು ಸಂರಕ್ಷಿಸಲಿರುವ ಹೋರಾಟವಾಗಿದೆ ಇದು ಎಂದು ಎಸ್ಎಫ್ಐ ರಾಜ್ಯಾಧ್ಯಕ್ಷ ಎಂ. ಶಿವಪ್ರಸಾದ್ ನುಡಿದರು.