ಏರ್ವಾಡಿಯಿಂದ ಮರಳುತ್ತಿದ್ದ ಮಹಿಳೆ ರೈಲಿನಲ್ಲಿ ಹೃದಯಾಘಾತದಿಂದ ನಿಧನ

ಕಾಸರಗೋಡು: ಏರ್ವಾಡಿಯಿಂದ ಮರಳುತ್ತಿದ್ದ ಕಾಸರಗೋಡು ನಿವಾಸಿ ಮಹಿಳೆ ರೈಲಿನಲ್ಲಿ ಹೃದಯಾ ಘಾತವುಂಟಾಗಿ ಮೃತಪಟ್ಟರು. ಉಳಿಯ ತ್ತಡ್ಕ ನಿವಾಸಿ ಅವ್ವಾಬಿ (64) ಎಂಬ ವರು ಮೃತಪಟ್ಟ ದುರ್ದೈವಿಯಾಗಿದ್ದಾರೆ. ಏಳು ಮಂದಿ ತಂಡದೊಂದಿಗೆ ಇವರು ಏರ್ವಾಡಿ ತೀರ್ಥಾಟನೆಗೆ ತೆರಳಿದ್ದರು. ಇವರು ಚೆನ್ನೈ ಎಗ್ಮೋರ್-ಮಂಗಳೂರು ಎಕ್ಸ್‌ಪ್ರೆಸ್ ರೈಲಿನಲ್ಲಿ ಮರಳುತ್ತಿದ್ದರು. ರೈಲು ಶೊರ್ನೂರಿಗೆ ತಲುಪಿದಾಗ ಅವ್ವಾಬಿಗೆ ಎದೆನೋವು ಉಂಟಾಗಿದೆ. ಕೂಡಲೇ ಆರ್‌ಪಿಎಫ್‌ನ ಸಹಾಯದೊಂದಿಗೆ ವೈದ್ಯರು ತಲುಪಿ ಔಷಧಿ ನೀಡಿದ್ದರು. ಅನಂತರ ನೋವು ಕಡಿಮೆಯಾದ ಹಿನ್ನಲೆಯಲ್ಲಿ ಪ್ರಯಾಣ ಮುಂದುವರಿ ಸಿದ್ದರು. ರಾತ್ರಿ 11.30ರ ವೇಳೆ ಕುಟ್ಟಿಪುರಂಗೆ ತಲುಪುವ ಮೊದಲೇ ಅವ್ವಾಬಿಗೆ ಮತ್ತೆ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಕುಟ್ಟಿಪುರಂ ಸರಕಾರಿ ತಾಲೂಕು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತದೇಹವನ್ನು ಕಲ್ಲಿಕೋಟೆ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ತಲುಪಿಸಲಾಗಿದೆ.

RELATED NEWS
ಬದಿಯಡ್ಕದಲ್ಲಿ ಹಸಿರು ಕ್ರಿಯಾಸೇನೆಯಲ್ಲೂ ವಂಚನೆ: 4,000 ರೂ. ಯೂಸರ್ ಫೀಸ್ ಬ್ಯಾಂಕ್‌ನಲ್ಲಿ ಪಾವತಿಸಿ ಪಂ. ಕಚೇರಿಯಲ್ಲಿ ನೀಡಿದ ರಶೀದಿಯಲ್ಲಿ 40,000 ವಾಗಿ ತಿದ್ದುಪಡಿ; ಮಹಿಳಾ ಅಸೋಸಿಯೇಶನ್ ವಿಲ್ಲೇಜ್ ಅಧ್ಯಕ್ಷೆ ಸಹಿತ ಇಬ್ಬರನ್ನು ಕೆಲಸದಿಂದ ತೆರವು

You cannot copy contents of this page