ಹೆರಿಗೆ ಬಳಿಕ ರಕ್ತಸ್ರಾವ: ಯುವತಿ ಮೃತ್ಯು

ಬದಿಯಡ್ಕ: ಹೆರಿಗೆ ಬಳಿಕ ಉಂಟಾದ ರಕ್ತಸ್ರಾವದಿಂದಾಗಿ ಯುವತಿ ಮೃತಪಟ್ಟ ಘಟನೆ ನಡೆದಿದೆ. ಸಹಕಾರಿ ಇಲಾಖೆ ಜೂನಿಯರ್ ಅಡಿಟರ್ ಮಾವಿನಕಟ್ಟೆಯ ಟಿ. ನಳಿನಾಕ್ಷಿ (42) ಮೃತಪಟ್ಟ ಯುವತಿ. ಇವರು ಅರವತ್ ಕುದಿರಕ್ಕೋಡ್‌ನ ರಾಘನ್‌ರ ಪತ್ನಿಯಾಗಿದ್ದಾರೆ. ಫೆ. 24ರಂದು  ನಳಿನಾಕ್ಷಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಹೆರಿಗೆ ಬಳಿಕ ಉಂಟಾದ ರಕ್ತಸ್ರಾವದ ಹಿನ್ನೆಲೆಯಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿದ್ದ ನಳಿನಾಕ್ಷಿ ಶನಿವಾರ ರಾತ್ರಿ ಮೃತಪಟ್ಟಿದ್ದಾರೆ. ರಕ್ತಸ್ರಾವ ಹಾಗೂ ಬಳಿಕ ಉಂಟಾದ ಹೃದಯಾಘಾ ತವೇ ಸಾವಿಗೆ ಕಾರಣವೆಂದು ಹೇಳಲಾಗುತ್ತಿದೆ. ಇದು ನಳಿನಾಕ್ಷಿಯ ಮೂರನೇ ಹೆರಿಗೆಯಾಗಿದೆ. ಇವರಿಗೆ ಧ್ಯಾನ್‌ದೀಪ್, ಲಿಶಂತ್ ಎಂಬೀ ಮಕ್ಕಳಿದ್ದಾರೆ. ಮೃತದೇಹವನ್ನು ನಿನ್ನೆ ಬೆಳಿಗ್ಗೆ ಅರವತ್ ಕುದಿರಕ್ಕೋಡ್‌ನ ಪತಿ ಮನೆಗೆ ತಲುಪಿಸಿ ಸಾರ್ವಜನಿಕ ದರ್ಶನಕ್ಕಿರಿಸಿದ ಬಳಿಕ ಸಂಜೆ ಮಾವಿನಕಟ್ಟೆಯ ಮನೆಗೆ ತಲುಪಿಸಿ ಅಂತ್ಯಸಂಸ್ಕಾರ ನಡೆಸಲಾಯಿತು.

RELATED NEWS

You cannot copy contents of this page