ಏಷ್ಯನ್ ಗೇಮ್ಸ್ ಅನಾವರಣಕ್ಕೆ ಕ್ಷಣಗಣನೆ

ಹಾಂಗ್ಝೂ: ಏಷ್ಯನ್ ಗೇಮ್ಸ್‌ನ ಅನಾವರಣಕ್ಕೆ ಚೀನಾದ ಹಾಂಗ್ಝೂ ನಲ್ಲಿ ಕ್ಷಣಗಣನೆ ಆರಂಭಗೊಂಡಿದೆ. ಇಂದು ಸಂಜೆ ೫.೩೦ಕ್ಕೆ ಹಾಂಗ್ಝೂ ಲಿಂಪಿಕ್ಸ್ ಸ್ಪೋರ್ಟ್ಸ್ ಸೆಂಟರ್‌ನಲ್ಲಿ ಅದ್ದೂರಿಯ ಸಮಾರಂಭದಲ್ಲಿ ಕ್ರೀಡಾಕೂಟದ ಉದ್ಘಾಟನೆ ನಡೆಯಲಿದೆ. ಉದ್ಘಾಟನಾ ಸಮಾರಂಭ ಎರಡು ಗಂಟೆ ಕಾಲ ಮುಂದುವರಿಯಲಿದೆ.ಕ್ರೀಡಾ ಕೂಟ ೧೫ ದಿನಗಳ ತನಕ ಮುಂದುವರಿಯಲಿದೆ. ಇದರಲ್ಲಿ ಭಾರತ ದಾಖಲೆಯ ೬೫೦ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ.

You cannot copy contents of this page