ಏಷ್ಯಾಕಪ್ ಅಂತಾರಾಷ್ಟ್ರೀಯ ಕರಾಟೆ ಚಾಂಪ್ಯನ್ಶಿಪ್ನಲ್ಲಿ ಚಿನ್ನದ ಪದಕ ಗೆದ್ದ ಗಡಿನಾಡಿನ ಬಾಲಕ ನಿಹಾಲ್
ಮಂಜೇಶ್ವರ: ಮುಂಬೈನಲ್ಲಿ ನಡೆದ ಏಷ್ಯಾಕಪ್ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ನಲ್ಲಿ ಕುಂಜತ್ತೂರು ತೂಮಿನಾಡಿನ ಅಬ್ದುಲ್ಲಾ ನಿಹಾಲ್ ನೌಶಾದ್ ಎರಡು ಚಿನ್ನ ಗೆದ್ದು ನಾಡಿಗೆ ಕೀರ್ತಿ ತಂದಿದ್ದಾನೆ. ಭಾರತ, ಶ್ರೀಲಂಕಾ, ಜಪಾನ್, ಭೂತಾನ್, ಬಾಂಗ್ಲಾದೇಶ ಮತ್ತು ನೇಪಾಳದ ಸ್ಪರ್ಧಿಗಳನ್ನು ಸೋಲಿಸಿ ಮಿಂಚಿದ ನಿಹಾಲ್ ಕಟ್ಟಾ ಮತ್ತು ಕುಮಿಟೆ ಎರಡೂ ವಿಭಾಗಗಳಲ್ಲಿ ಪ್ರಥಮ ಸ್ಥಾನವನ್ನು ತನ್ನದಾಗಿಸಿದ್ದಾನೆ. ಈಗಾಗಲೇ ಜಿಲ್ಲಾ ಮತ್ತು ರಾಜ್ಯ ಕರಾಟೆ ಚಾಂಪಿಯನ್ ಶಿಪ್ಗಳಲ್ಲಿ ಪ್ರಶಸ್ತಿಗಳನ್ನು ಗೆದ್ದಿರುವ ನಿಹಾಲ್ ೨೦೧೯ರಲ್ಲಿ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ನಲ್ಲೂ ಕರ್ನಾಟಕವನ್ನು ಪ್ರತಿನಿಧಿಸಿದ್ದಾನೆ. ರೆಫರಿಯಾಗಿ ಸೇವೆ ಸಲ್ಲಿಸುವ ಅವಕಾಶವೂ ಈತನಿಗೆ ಲಭಿಸಿದೆ. ಮಂಗಳೂರು ಪೀಸ್ ಪಬ್ಲಿಕ್ ಶಾಲೆಯ ೯ನೇ ತರಗತಿ ವಿದ್ಯಾರ್ಥಿಯಾಗಿರುವ ಈತನನ್ನು ಹಲವರು ಅಭಿನಂದಿಸಿದ್ದಾರೆ.