ಒಬ್ಬಳನ್ನು ಪ್ರೀತಿಸಿ ಇನ್ನೊಬ್ಬಳಿಗೆ ತಾಳಿಕಟ್ಟಿದ ಯುವಕ: ಮದುವೆ ಮಂಟಪದಲ್ಲಿ ಯುವತಿಯ ರಾದ್ಧಾಂತ

ತಲಪ್ಪಾಡಿ: ಮದುವೆ ಕಾರ್ಯಕ್ರಮ ನಡೆಯುತ್ತಿದ್ದಂತೆ ವರನ ಪ್ರೇಯಸಿಯೆಂದು ತಿಳಿಸಿ ಯುವತಿಯೋರ್ವೆ ಮದುವೆ ಮಂಟಪಕ್ಕೆ ತಲುಪಿ ವರ ತನಗೆ ಮೋಸ ಮಾಡಿದ್ದಾನೆಂದು ತಿಳಿಸಿ ರಾದ್ಧಾಂತ ನಡೆಸಿದ್ದಾಳೆ. ಇದರಿಂದ ವಧುವಿನ ಸಂಬಂಧಿಕರ ಸಹಿತ ಅಲ್ಲಿ ನೆರೆದಿದ್ದವರು ಗಲಿಬಿಲಿಗೊಂಡಿದ್ದು, ಅಷ್ಟರಲ್ಲಿ  ವರ ದಿಢೀರ್ ಅಪ್ರತ್ಯಕ್ಷಗೊಂಡಿದ್ದಾನೆ. ಇದರಿಂದ ಕಂಗಾಲಾದ ವಧುವಿನ ಮನೆಯವರು ತಮ್ಮ ಮನೆಗೆ ವಾಪಸಾಗಿದ್ದಾರೆ. ಈ ಘಟನೆ ನಿನ್ನೆ ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯ ಬೀರಿ ಸಮೀಪ  ನಡೆದಿದೆ.

ಕಲ್ಲಿಕೋಟೆ ನಿವಾಸಿಯಾದ ಯುವಕ ಹಾಗೂ ಮಂಗಳೂರು ಮೂಲದ ಯುವತಿಯ ಮದುವೆ ನಿನ್ನೆ ಬೀರಿ ಸಮೀಪ ನಡೆದಿದೆ. ಅಷ್ಟರಲ್ಲಿ ಮೈಸೂರು ಮೂಲದ ಯುವತಿಯೋರ್ವೆ ಮದುವೆ ಮಂಟಪಕ್ಕೆ ತಲುಪಿದ್ದಾಳೆ. ವರ ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ನಡೆಸಿದ್ದು ಅಲ್ಲದೆ ತನ್ನಿಂದ ಹಣವನ್ನು ಪಡೆದುಕೊಂಡು ಮೋಸ ಮಾಡಿದ್ದಾನೆಂದು ಆರೋಪಿಸಿದ್ದಾಳೆ. ಯುವತಿಯ ಆರೋಪ ಹಾಗೂ ರಾದ್ಧಾಂತದಿಂದಾಗಿ ಅಲ್ಲಿ ನೆರದವರು  ಗಲಿಬಿಲಿಗೊಂಡು ನಿಂತುಕೊಂಡಿದ್ದಾಗ ವರ ಅಲ್ಲಿಂದ ಕಾರಿನಲ್ಲಿ ತೆರಳಿದ್ದಾನೆ.

ಯುವಕ ಹಾಗೂ ಯುವತಿ ಮ್ಯಾರೇಜ್ ವೆಬ್‌ಸೈಟ್‌ನಲ್ಲಿ ಪರಿಚಯಗೊಂಡಿದ್ದಾರೆನ್ನಲಾಗಿದೆ. ಬಳಿಕ ಯುವತಿಯನ್ನು ಮದುವೆಯಾಗುವುದಾಗಿ ತಿಳಿಸಿ ಯುವಕ ಆಕೆಗೆ ವಂಚಿಸಿದ್ದಾನೆಂದೂ ದೂರಲಾಗಿದೆ. ನಿನ್ನೆ ಯುವಕನ ಮದುವೆ ಬೇರೊಬ್ಬಳೊಂದಿಗೆ ನಡೆಯುತ್ತಿರುವ ವಿಷಯ ತಿಳಿದ ಯುವತಿ ಅಲ್ಲಿಗೆ ಪೊಲೀಸರೊಂದಿಗೆ ತಲುಪಿದ್ದಾಳೆ. ಇದೇ ವೇಳೆ ಯುವತಿ ಅಲ್ಲಿಗೆ ಬರುವ ವಿಷಯ ವರನಿಗೆ ಮೊದಲೇ ತಿಳಿದಿತ್ತೆಂದೂ ಹೇಳಲಾಗುತ್ತಿದೆ. ಇದರಿಂದ ನಿನ್ನೆ ಬೆಳಿಗ್ಗೆ ಮದುವೆ ಮಂಟಪಕ್ಕೆ ತಲುಪಿದ ಕೂಡಲೇ ತರಾತುರಿಯಲ್ಲಿ ವಧುವಿಗೆ ತಾಳಿಕಟ್ಟಿ ಮದುವೆ ಶಾಸ್ತ್ರ ಮುಗಿಸಿದ್ದಾನೆಂದು ಹೇಳಲಾಗುತ್ತಿದೆ.

RELATED NEWS

You cannot copy contents of this page