ಕರ್ನಾಟಕ ಮದ್ಯ ಸಹಿತ ಓರ್ವ ಸೆರೆ
ಕುಂಬಳೆ: ಪೆರ್ಮುದೆ ಪಳ್ಳದಲ್ಲಿ ಅಬಕಾರಿ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ೧೮೦ ಮಿಲ್ಲಿಯ ೧೬ ಪ್ಯಾಕೆಟ್ ಕರ್ನಾಟಕ ಮದ್ಯ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಕಿದೂರು ಕಳತ್ತೂರು ಪಂಜಿಕ್ಕಲ್ನ ಜೋನ್ ಪೋಲ್ ಡಿ (೩೬) ಎಂಬಾತನನ್ನು ಸೆರೆಹಿಡಿ ಯ ಲಾಗಿದೆ. ನಿನ್ನೆ ಸಂಜೆ ಕುಂಬಳೆ ರೇಂಜ್ ಅಬಕಾರಿ ಪ್ರಿವೆಂಟೀವ್ ಆಫೀಸರ್ ಮನಾಫ್ ಕೆ.ವಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಪೆರ್ಮುದೆ ಪಳ್ಳ ಸಹಿತ ಪರಿಸರ ಪ್ರದೇಶಗಳಲ್ಲಿ ವ್ಯಾಪಕವಾಗಿ ಕರ್ನಾಟಕ ಮದ್ಯ ಮಾರಾಟವಾಗು ತ್ತಿದೆಯೆಂಬ ದೂರಿನ ಹಿನ್ನೆಲೆಯಲ್ಲಿ ಕಾರ್ಯಾ ಚರಣೆ ನಡೆಸ ಲಾಗಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.