ಕಾರನ್ನು ಹಿಂದಿಕ್ಕಿದ ದ್ವೇಷ: ಇಬ್ಬರು ಯುವಕರಿಗೆ ಹಲ್ಲೆ: 4 ಮಂದಿ ವಿರುದ್ಧ ನರಹತ್ಯಾಯತ್ನ ಕೇಸು

ಮಂಜೇಶ್ವರ: ಕಾರನ್ನು ಹಿಂದಿಕ್ಕ ಲಾಯಿತೆಂಬ ದ್ವೇಷದಿಂದ ಯುವಕರನ್ನು ತಡೆದು ನಿಲ್ಲಿಸಿ ಹಲ್ಲೆಗೈದ ಬಗ್ಗೆ ದೂರಲಾಗಿದೆ. ಪಾವೂರು ಕೋಡಿ ಹೌಸ್‌ನ ಅಬ್ದುಲ್ ಖಾದರ್ (39), ಮುಹಮ್ಮದ್ ಜೌಹಾರ್ (31) ಎಂಬಿವರು ಹಲ್ಲೆಗೀಡಾ ಗಿದ್ದಾರೆ. ಈ ಬಗ್ಗೆ ಅಬ್ದುಲ್ ಖಾದರ್ ನೀಡಿದ ದೂರಿನಂತೆ ಹೊಸಂಗಡಿಯ ಯಾಕೂಬ್, ಪಾವೂರಿನ ಮುಬಾರಕ್, ಮಚ್ಚಂಪಾಡಿಯ ಜಬ್ಬಾರ್, ಮಂಜೇಶ್ವರದ ಅಶ್ರಫ್ ಎಂಬಿವರ ವಿರುದ್ದ ಮಂಜೇಶ್ವರ ಪೊಲೀಸರು ನರಹತ್ಯಾ ಯತ್ನ ಕೇಸು ದಾಖಲಿಸಿಕೊಂಡಿದ್ದಾರೆ. ನಿನ್ನೆ ಸಂಜೆ ವರ್ಕಾಡಿ ಮಚ್ಚಂಪಾಡಿ ಪಳ್ಳ ಎಂಬಲ್ಲಿ  ಘಟನೆ ನಡೆದಿದೆ. ಯುವಕರನ್ನು ತಡೆದು ನಿಲ್ಲಿಸಿದ್ದ ಬಳಿಕ ಮರದ ಬೆತ್ತ, ಚಾಕು ಮೊದಲಾದ ಮಾರಕಾಯುಧಗಳಿಂದ ಹಲ್ಲೆಗೈದಿರುವುದಾಗಿಯೂ, ಈ ವೇಳೆ ಓಡಿ ಪಾರಾಗದಿರುತ್ತಿದ್ದಲ್ಲಿ ಸಾವು ಸಂಭವಿಸುತ್ತಿತ್ತೆಂದು ಪ್ರಕರಣದಲ್ಲಿ ತಿಳಿಸಲಾಗಿದೆ.

You cannot copy contents of this page