ಕಾರು- ಸ್ಕೂಟರ್ ಢಿಕ್ಕಿ: ಸಹೋದರಿಯರಿಗೆ ಗಾಯ; ಆಸ್ಪತ್ರೆಗೆ

ಕುಂಬಳೆ: ಕುಂಬಳೆ ಬದಿಯಡ್ಕ ರಸ್ತೆಯ ಪೆಟ್ರೋಲ್ ಬಂಕ್ ಬಳಿ ಕಾರು- ಸ್ಕೂಟರ್ ಢಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಸ್ಕೂಟರ್ ಸವಾರರಾದ ಸಹೋದರಿ ಯರು ಗಾಯಗೊಂಡರು. ನಾಯ್ಕಾಪು ನಾರಾಯಣಮಂಗಲ ನಿವಾಸಿ ಚೈತನ್ಯ (೨೨)ರಿಗೆ ಗಂಭೀರ ಗಾಯಗೊಂಡಿದ್ದು ಇವರನ್ನು ಮಂಗಳೂರಿನ ಆಸ್ಪತ್ರೆಗೂ, ಗಾಯಗೊಂಡ ಚೈತ್ರಾ (೨೦)ರನ್ನು ಕಾಸರಗೋಡಿನ ಆಸ್ಪತ್ರೆಗೂ ದಾಖಲಿಸಲಾಗಿದೆ. ನಿನ್ನೆ ಸಂಜೆ ಅಪಘಾತ ಸಂಭವಿಸಿದೆ.

You cannot copy contents of this page