ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರ ನವೀಕರಣೆ ಅ. 29ರಂದು ಶಿಲಾನ್ಯಾಸ

ಕಾಸರಗೋಡು: ಕಾಸರಗೋಡು ಜನರಲ್ ಆಸ್ಪತ್ರೆ ಶವಾಗಾರವನ್ನು ನವೀಕರಿಸಲಾಗುವುದು. ಇದರ ಶಿಲಾನ್ಯಾಸವನ್ನು ಈ ತಿಂಗಳ 29ರಂದು ಶಾಸಕ ಎನ್.ಎ. ನೆಲ್ಲಿಕುನ್ನು ನಿರ್ವಹಿಸುವರು. ಇದರಂತೆ ಶವಾಗಾರದ ಪಕ್ಕದಲ್ಲೇ ಈ ಹೊಸ ಕಟ್ಟಡ ನಿರ್ಮಿ ಸಲಾಗುವುದು. ಇದಕ್ಕಾಗಿ ಒಂದು ಕೋಟಿ ರೂ. ಸರಕಾರ ಬಿಡುಗಡೆಗೊಳಿಸಿದೆ.

ಒಂದೇ ವೇಳೆ ಎರಡು ಮೃತದೇಹ ಗಳನ್ನು ಮರಣೋತ್ತರ ಪರೀಕ್ಷೆಗೊಳಪಡಿ ಸುವ ಸೌಕರ್ಯ ಇಲ್ಲಿ ಏರ್ಪಡಿಸಲಾಗು ವುದು. ಈಗ ಇಲ್ಲಿ ಒಂದು ಮೃತದೇಹವನ್ನು ಮಾತ್ರವೇ ಮರಣೋತ್ತರಪರೀಕ್ಷೆ ಗೊಳಪಡಿಸುವ ಸೌಕರ್ಯ ಮಾತ್ರವೇ ಇದೆ. ನವೀಕೃತ ಶವಾಗಾರ ಕಟ್ಟಡದಲ್ಲಿ ವೈದ್ಯರುಗಳಿಗಾಗಿ ವಿಶೇಷ ಕೊಠಡಿಯನ್ನೂ ನಿರ್ಮಿಸಲಾಗುವುದು.

ರಾತ್ರಿ ವೇಳೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸುವ ಸೌಕರ್ಯ ಹೊಂದಿರುವ ರಾಜ್ಯದ ಏಕೈಕ ಆಸ್ಪತ್ರೆಯೂ ಆಗಿದೆ ಕಾಸರಗೋಡು ಜನರಲ್ ಆಸ್ಪತ್ರೆ. ಇಲ್ಲಿ ದೈನಂದಿನ ಸರಾಸರಿಯಾಗಿ ಐದರಷ್ಟು ಮೃತದೇಹ ಗಳು ಮರಣೋತ್ತರ ಪರೀಕ್ಷೆಗಾಗಿ ತಲುಪುತ್ತಿದೆ. ಮೃತದೇಹಗಳ ಮರಣೋತ್ತರ ಪರೀಕ್ಷೆಗೆ ಓರ್ವ ಫೋರೆನ್ಸಿಕ್ ಸರ್ಜನ್ ಮತ್ತು ಓರ್ವ ಅಸಿಸ್ಟೆಂಟ್ ಸರ್ಜನ್ ಈಗ ಈ ಆಸ್ಪತ್ರೆಯಲ್ಲಿದ್ದಾರೆ. ಇನ್ನು ನವೀಕೃತ ಶವಾಗಾರದಲ್ಲಿ ಒಂದೇ ಬಾರಿ ಎರಡು ಮೃತದೇಹ ಗಳನ್ನು ಮರಣೋತ್ತರ ಪರೀಕ್ಷೆ ನಡೆಸಬೇಕಾಗಿದ್ದಲ್ಲಿ ಅದಕ್ಕೆ ನಾಲ್ವರು ಫೋರೋನ್ಸಿಕ್ ತಜ್ಞರ ಅಗತ್ಯ ಉಂಟಾಗಲಿದೆ.

ಒಂದು ಮೃತದೇಹದ ಇನ್‌ಕ್ವೆಸ್ಟ್ (ಶವಮಹಜರು) ಮತ್ತು ಮರಣೋತ್ತರ ಪರೀಕ್ಷೆ ನಡೆಸಲು ಸಾಧಾರಣವಾಗಿ ಒಂದು ಗಂಟೆ ಬೇಕಾಗಿ ಬರುತ್ತಿದೆ. ನವೀಕೃತ ಕಟ್ಟಡದಲ್ಲಿ ಹೆಚ್ಚುವರಿ ಫ್ರೀಜರ್ ಇತ್ಯಾದಿ ಆಯ್ದ ಎಲ್ಲಾ ಆಧುನಿಕ ಸೌಕರ್ಯಗಳೂ ಒಳಗೊಳ್ಳಲಿದೆ.

Leave a Reply

Your email address will not be published. Required fields are marked *

You cannot copy content of this page