ಸೋಂಕಾಲ್ ಜಂಕ್ಷನ್‌ನಲ್ಲಿ ಒಬಿಸಿ ಮೋರ್ಚಾದಿಂದ ಮೋದಿ ಜನ್ಮ ದಿನಾಚರಣೆ

ಉಪ್ಪಳ: ನರೇಂದ್ರ ಮೋದಿ ಜಗತ್ತು ಕಂಡ ಶ್ರೇಷ್ಠ ನಾಯಕನಾಗಿದ್ದು, ಯುವ ಪೀಳಿಗೆ ನರೇಂದ್ರ ಮೋದಿಯವರ ಮಾರ್ಗವನ್ನು ಅನುಸರಿಸಬೇಕು ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮುರಳೀ ಧರ್ ಯಾದವ್ ನುಡಿದರು. ಅವರು ಒಬಿಸಿ ಮೋರ್ಚಾ ಕಾಸರಗೋಡು ಇದರ ಆಶ್ರಯದಲ್ಲಿ ಮಂಗಲ್ಪಾಡಿ ಸೋಂಕಾಲ್ ಜಂಕ್ಷನ್‌ನಲ್ಲಿ ನರೇಂದ್ರ ಮೋದಿಯವರ ೭೫ನೇ ಹುಟ್ಟುಹಬ್ಬ ಆಚರಣೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಒಬಿಸಿ ಮಾರ್ಚ್ ಜಿಲ್ಲಾಧ್ಯಕ್ಷ ಕೆ.ಪಿ. ವಲ್ಸರಾಜ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಲೋಕೇಶ್ ನೋಂಡ, ಬಿಜೆಪಿ ಕುಂಬಳೆ ಮಂಡಲ ಪ್ರಧಾನ ಕಾರ್ಯದರ್ಶಿ ವಸಂತ ಮಯ್ಯ ಶುಭಾಶಂಸನೆಗೈದರು. ಉದಯಕುಮಾರ್ ಸ್ವಾಗತಿಸಿ, ಪ್ರವೀಣ್ ಕುಮಾರ್ ವಂದಿಸಿದರು. ಯೋಗ ಶಿಕ್ಷಕ ಪ್ರವೀಣ್ ಕುಮಾರ್ ಸಿಹಿ ವಿತರಿಸಿದರು.

You cannot copy contents of this page