ಕಾಸರಗೋಡು-ಮಂಗಳೂರು ರೂಟ್‌ನಲ್ಲಿ ‘ರಾಜಹಂಸ ಬಸ್’ ಸೇವೆ ಆರಂಭ
ಕಾಸರಗೋಡು: ಮಂಗಳೂರು-ಕಾಸರಗೋಡು ರೂಟ್ ನಲ್ಲಿ ಪ್ರಯಾಣಿಕರಿಗೆ ಇನ್ನಷ್ಟು ಹೆಚ್ಚಿನ ಪ್ರಯೋಜನಕಾರಿ ಯಾಗುವಂತೆ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹೊಸ ದಾಗಿ ‘ರಾಜಹಂಸ’ ಬಸ್ ಆರಂಭಿಸಿದೆ.
ಬಸ್ಗಳು ದೈನಂದಿನ ಆರು ಸೇವೆ ಗಳನ್ನು ನಡೆಸಲಿವೆ. ಇದರಂತೆ ಬೆಳಿಗ್ಗೆ 6.30, 7.30, 10.30, 11.30, ಮಧ್ಯಾಹ್ನ ನಂತರ 3 ಮತ್ತು 3.30ಕ್ಕೆ ಮಂಗಳೂರಿನಿAದ ಕಾಸರಗೋಡಿಗೆ ಸೇವೆ ನಡೆಸುತ್ತಿದೆ. ಕಾಸರಗೋಡಿನಿಂದ ಬೆಳಿಗ್ಗೆ 8.30, 9.30, ಮಧ್ಯಾಹ್ನದ ಬಳಿಕ 1.30, 5 ಮತ್ತು 5.30ಕ್ಕೆ ಈ ಬಸ್ ಸಂಚಾರ ನಡೆಸುತ್ತಿದೆ.
ಸಾಧಾರಣ ಕೆಎಸ್ಆರ್ಟಿಸಿ ಬಸ್ಗಳು ಕಾಸರಗೋಡಿನಿಂದ ಮಂ ಗಳೂರು ತಲುಪಲು 1 ಗಂಟೆ 35 ನಿಮಿಷ ಬೇಕಾಗುತ್ತಿದೆ. ಆದರೆ ರಾಜಹಂಸ ಬಸ್ನಲ್ಲಿ 1ಗಂಟೆ 15 ನಿಮಿಷದಲ್ಲಿ ಮಂಗಳೂರು ತಲುಪುತ್ತಿದೆ. ಪುಷ್ ಬ್ಯಾಕ್ ಸೀಟು, ಸೀಟ್ ಪೋಕೆಟ್, ಬೋಟಲ್ ಹೋಲ್ಡರ್ ಇತ್ಯಾದಿ ಸೌಕರ್ಯಗಳಿರುವ ಬಸ್ ಆಗಿದೆ ರಾಜಹಂಸ. ಮಂಗಳೂರಿನಿAದ ಕಾಸರಗೋಡು ತನಕದ ಯಾತ್ರಾ ದರ 100ರೂ. ಆಗಿದೆ. ಮಂಗಳೂರಿನಿAದ ಕುಂಬಳೆಗೆ 80 ರೂ., ಮತ್ತು ಕುಂಬಳೆಯಿAದ ಕಾಸರಗೋಡಿಗೆ ಟಿಕೆಟ್ ದರ 30 ರೂ. ಆಗಿದೆ. ಕುಂಬಳೆ, ಬಂದ್ಯೋಡು, ನಯಾಬಜಾರ್, ಕೈಕಂಬ, ಉಪ್ಪಳ, ಹೊಸಂಗಡಿ, ಮಂಜೇಶ್ವರ, ತಲಪ್ಪಾಡಿ ಮತ್ತು ಭೀರಿ ಎಂಬಿಡೆಗಳಲ್ಲಿ ಮಾತ್ರವೇ ನಿಲುಗಡೆ ನೀಡಲಾಗುತ್ತಿದೆ.